ಜಿಲ್ಲೆ

ಬಿಆರ್‌ಟಿಯಲ್ಲಿ ಹುಲಿ ಕಳೇಬರ ಪತ್ತೆ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಮಂಗಳವಾರ ಹುಲಿ ಕಳೇಬರ ಪತ್ತೆಯಾಗಿದೆ.

ಬೈಲೂರು ವಲಯದ ಬೆಳ್ಳಾಜೆ ಬೀಟ್ ವ್ಯಾಪ್ತಿಯ ಅತ್ತಿಕಾನೆ ಕಾಫಿ ಎಸ್ಟೇಟ್ ಬಳಿ ಹುಲಿ ಮೃತದೇಹ ಪತ್ತೆಯಾಗಿದೆ. ದೇಹದಲ್ಲಿ ಗಾಯದ ಗುರುತುಗಳಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ಕಾರಣ ತಿಳಿಯಲಿದೆ ಎಂದು ಬಿಆರ್‌ಟಿ ಡಿಸಿಎ್ ದೀಪಾ ಜೆ.ಕಾಂಟ್ರಾಕ್ಟರ್ ತಿಳಿಸಿದ್ದಾರೆ.