ಜಿಲ್ಲೆ

ಬಸಪ್ಪನಪಾಳ್ಯದಲ್ಲಿ ಬಿಜೆಪಿ ಸೇರ್ಪಡೆ

reportermys

ಚಾಮರಾಜನಗರ: ಇಲ್ಲಿನ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರ ಕಾರ್ಯವೈಖರಿಯನ್ನು ಮೆಚ್ಚಿ ತಾಲೂಕಿನ ಬಸಪ್ಪನಪಾಳ್ಯದ ಅನೇಕ ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.


ಬಸಪ್ಪಪಾಳ್ಯದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಆಲೂರು ನಟರಾಜು ಅವರ ಸಮ್ಮುಖದಲ್ಲಿ ಬಸವರಾಜು, ತೆಂಗಿನಕಾಯಿ ವ್ಯಾಪಾರಿಗಳಾದ ಲಿಂಗರಾಜು, ಸಿದ್ದೇಗೌಡ, ಮಾದೇಗೌಡ, ಬೋರೇಗೌಡ, ಚಿನ್ನಸ್ವಾಮಿ, ಮುದ್ದು ಮಲ್ಲೇಗೌಡ, ರಾಜು, ಮಹೇಶ್, ಶಿವಣ್ಣ, ಶಿವಣ್ಣ, ಮರಿಸ್ವಾಮಿ, ನಂಜುಂಡ ಸ್ವಾಮಿ, ನಾರಾಯಣ ಸೇರಿದಂತೆ 20ಕ್ಕೂ ಹೆಚ್ಚು ಮುಖಂಡರು ಸೇರ್ಪಡೆಯಾದರು.

ಇದೇ ವೇಳೆ ಬಿಜೆಪಿ ಮುಖಂಡ ಆಲೂರು ನಟರಾಜು ಮಾತನಾಡಿ, ವಿ.ಸೋಮಣ್ಣ ಅವರ ನಾಯಕತ್ವದಲ್ಲಿ ಜಿಲ್ಲೆಯಲ್ಲಿ ಚುನಾವಣೆ ನಡೆಯುತ್ತಿದೆ. ಸೋಮಣ್ಣ ಸೇರಿದಂತೆ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿ, ಮತ್ತೆ ಬಿಜೆಪಿ ಸರ್ಕಾರ ಬರುತ್ತದೆ. ವಿ.ಸೋಮಣ್ಣ ಸಚಿವರಾಗುವ ಜತೆಗೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳಾಗುವ ಅದೃಷ್ಟ ಸಹ ಅವರಿಗಿದೆ. ಹೀಗಾಗಿ ಕ್ಷೇತ್ರ ಜನರು ಮುಖ್ಯಮಂತ್ರಿ ಅಭ್ಯರ್ಥಿಗೆ ಮತ ಹಾಕುತ್ತಿದ್ದೇವೆ ಎಂದು ಭಾವಿಸಿ, ಅವರನ್ನು ಹೆಚ್ಚು ಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.