ಚಾಮರಾಜನಗರ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ ವತಿಯಿಂದ ಸ್ವಾತಂತ್ರ್ಯೋವದ ಅಂಗವಾಗಿ ದೃಷ್ಠಿ ವಿಕಲಚೇತನ ಮಕ್ಕಳಿಗೆ ರಾಷ್ಟ್ರಧ್ವಜ ಹಾಗೂ ಸಿಹಿ ವಿತರಣೆ ಮಾಡಲಾಯಿತು.
ತಾಲೂಕಿನ ಭೋಗಾಪುರ ದೀಪಾ ಆಕಾಡೆಮಿ ದೃಷ್ಠಿ ವಿಕಲಚೇತನ ಮಕ್ಕಳ ವಸತಿಯುಕ್ತ
ಶಾಲೆಯಲ್ಲಿ ಧ್ವಜ ಹಾಗೂ ಸಿಹಿ ವಿತರಿಸಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ ಗೌರವ ಅಧ್ಯಕ್ಷ ಸುರೇಶ್‌ಗೌಡ ಮಾತನಾಡಿ,ಸ್ವಾತಂತ್ರೋತ್ಸವದ ಅಂಗವಾಗಿ ದೃಷ್ಠಿ ವಿಕಲಚೇತನ ಮಕ್ಕಳಿಗೆ ಸಿಹಿ ವಿತರಣೆ ಮಾಡುವುದು ಖುಷಿಕೊಟ್ಟಿದೆ. ಈ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮರನ್ನು ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೇದಿಕೆಯ ಅಧ್ಯಕ್ಷ ಎಚ್.ಎಂ. ಶಿವಣ್ಣ, ಉಪಾಧ್ಯಕ್ಷ ಆರ್.ಮೂರ್ತಿ, ಖಜಾಂಚಿ ಪ್ರಕಾಶ್, ,ಕಾರ್ಯದರ್ಶಿ ರಾಜಣ್ಣ, ಜೊಸೇಫ್, ಚಿತ್ರನಟ ಶ್ರೀಸಾಯಿ ಮಂಜು, ಜಯರಾಜ್, ಮುತ್ತುರಾಜ್ ಕಿರಣ್‌ಕುಮಾರ್, ಬಂಗಾರು, ವಸಂತ, ಪುಟ್ಟಸ್ವಾಮಿ ಜನ್ನೂರು, ಅಕೀಲ್ ಅಮಹಮದ್ ಹಾಜರಿದ್ದರು.