ಚಾಮರಾಜನಗರ: ಕೃಷಿಯಲ್ಲಿ ನಷ್ಟ ಉಂಟಾದ ಕಾರಣ ರೈತನೊಬ್ಬ ಕುಟುಂಬ ಸಮೇತ ಹಳ್ಳಿ ಬಿಟ್ಟು ಪಟ್ಟಣ ಸೇರಿದ. ಸಾಲ ತೀರಿಸೋಕಾಗಿ ಗಂಡ ಒಂದು ಕಡೆ, ಹೆಂಡತಿ ಮತ್ತೊಂದು ಕಡೆ ಕೆಲಸಕ್ಕೆ ಸೇರಿದರು. ಹೆಂಡತಿಗೆ ಒಬ್ಬರ ಕೈ ಕೆಳಗೆ ಅಡಿಯಾಳಾಗಿ ಕೆಲಸ ಮಾಡೋಕೆ ಇಷ್ಟವಾಗಲೇ ಇಲ್ಲ. ಆಗ ಯೂಟ್ಯೂಬ್‌ನಲ್ಲಿ ‘ಡ್ರಾೃಗನ್ ್ರೂಟ್’ ಬೆಳೆಯೋ ವಿಡಿಯೋ ನೋಡಿ ತಾನೂ ಕೃಷಿಯಲ್ಲಿ ತೊಡಗಬೇಕೆಂಬ ಆಸಕ್ತಿ ಕೆರಳಿತು. ಮತ್ತೆ ಊರಿಗೆ ಹೋಗೋಕೆ, ಕೃಷಿ ಮಾಡೋಕೆ ಒಪ್ಪದ ಗಂಡನ ಮಾತನ್ನು ಧಿಕ್ಕರಿಸಿ ಮಣ್ಣು ನಂಬಿ ಬಂದ ಮಡದಿ ಈಗ ಮಾದರಿ ಕೃಷಿಕಳಾಗಿದ್ದಾರೆ. ಅಂದು ಪತ್ನಿ ಮಾತು ಒಪ್ಪದಿದ್ದ ಪತಿ ಇಂದು ಹೆಂಡತಿಯೊಂದಿಗೆ ಕೃಷಿ ಮಾಡಲು ಪಟ್ಟಣ ಬಿಟ್ಟು ಹಳ್ಳಿಗೆ ಮರಳಿದ್ದಾರೆ.!
ಇದು ಚಾಮರಾಜನಗರ ತಾಲೂಕಿನ ಅಮಚವಾಡಿ ಸಮೀಪದ ಕೆಂಪಾಲಕಟ್ಟೆ ಗ್ರಾಮದ ದಂಪತಿಯ ಕೃಷಿಗಾಥೆ. ರೈತ ಬಸವರಾಜು ಪತ್ನಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾ ಅವರ ಯಶೋಗಾಥೆ. ಎರಡ್ಮೂರು ವರ್ಷಗಳ ಹಿಂದೆ ಇವರ ಪರಿಸ್ಥಿತಿ ಹೀಗಿರಲಿಲ್ಲ. ಮಳೆ ಕೊರತೆ, ನೀರಿನ ಅಭಾವದಿಂದ ಬೆಳೆದಿದ್ದ ಟೊಮ್ಯೊಟೊ, ಬದನೆಕಾಯಿ ಬೆಳೆ ನಷ್ಟ ಉಂಟಾಗಿತ್ತು. ಇಬ್ಬರು ಮಕ್ಕಳು ಹಾಸ್ಟೆಲ್ ಸೇರಿಸಿದ್ದರಿಂದ ಸಾಲ ತೀರಿಸುವುದಕ್ಕಾಗಿ ಬಸವರಾಜು ಊರು ಬಿಟ್ಟು ಮೈಸೂರಿನ ಕಾಲೇಜೊಂದರಲ್ಲಿ ಸೂಪರ್‌ವೈಸರ್ ಆಗಿ ಕೆಲಸಕ್ಕೆ ಸೇರಿದರು. ಪತ್ನಿ ಕುಸುಮಾ ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ಹೋದರು. ಭೂಮಿ ಮಾಲೀಕರಾದ ನಾವು ಇಲ್ಲಿ ಹೀಗೆ ಕೂಲಿಕಾರರಾಗಿ ದುಡಿಯಬೇಕಲ್ಲ ಎನ್ನುವ ನೋವು ದಿನದಿಂದ ದಿನಕ್ಕೆ ಹೆಚ್ಚಾಯಿತು.
ಯೂಟ್ಯೂಬ್‌ನಲ್ಲಿ ಹೊಸದಾಗಿ ಕೃಷಿ ಮಾಡುವುದನ್ನು ಹುಡುಕಲಾರಂಭಿಸಿದ ಕುಸುಮಾ ಕೊನೆಗೆ ಡ್ರಾೃಗನ್ ಕೃಷಿಯತ್ತ ಆಸಕ್ತಿ ಬೆಳೆಸಿಕೊಂಡರು. ಮತ್ತೆ ಕೃಷಿಗೆ ಮರಳಲು ಒಪ್ಪದ ಪತಿ ಬಸವರಾಜು ಮಾತನ್ನು ಧಿಕ್ಕರಿಸಿ ಊರಿಗೆ ಹಿಂದಿರುಗಿದರು. ಒಬ್ಬಂಟಿ ಮಹಿಳೆ ತನ್ನ ಸಂಬಂಧಿಕರ ಸಹಾಯ ಪಡೆದು ಯೂಟ್ಯೂಬ್ ವಿಡಿಯೋದಲ್ಲಿ ವಿಳಾಸ ಹುಡುಕಿ ಡ್ರಾೃಗನ್ ಗಿಡ ತಂದು ಅರ್ಧ ಎಕರೆಯಲ್ಲಿ ಹಾಕಿದರು. ಇವುಗಳಿಗೆ ಬೇವಿನ ಹಿಂಡಿ ಹಾಕಿ ಸಾವಯವ ಕೃಷಿಯಲ್ಲಿ ತೊಡಗಿದರು. ಸುಮಾರು 800 ಗಿಡಗಳನ್ನು ಬೆಳೆದರು. ಇವುಗಳಲ್ಲಿ 600 ಗಿಡಗಳು ಹಣ್ಣು ಕೊಡುತ್ತಿದ್ದು, ಈಗಾಗಲೇ ಎರಡ್ಮೂರು ಸಲ 30 ಕೆಜಿಗೂ ಹೆಚ್ಚು ಹಣ್ಣುಗಳನ್ನು ಸ್ಥಳೀಯ ಮಾರಾಟಗಾರರಿಗೆ ಕೆಜಿಗೆ 150 ರೂ.ಗಳಂತೆ ಮಾರಾಟ ಮಾಡಿದ್ದಾರೆ. ಇನ್ನರ್ಧ ಎಕರೆಯಲ್ಲಿ ಕುಸುಮಾ ಗುಲಾಬಿ(ಬಟನ್) ಬೆಳೆದಿದ್ದಾರೆ. ಡ್ರಾೃಗನ್ ್ರೂಟ್ ಮಧ್ಯೆ ಬೀನ್ಸ್, ಗೋರಿಕಾಯಿ, ಬೆಂಡೆಕಾಯಿ, ಸೇಬು, ದ್ರಾಕ್ಷಿ, ಹೂ ಕಟ್ಟುವುದಕ್ಕೆ ಬಳಸುವ ಪನ್ನೀರ್ ಎಲೆ, ಬಟರ್ ್ರೂಟ್, ರಸಬಾಳೆ, ನಿಂಬೆ, ಮೆಣಸಿಕಾಯಿ, ಮೊಸಂಬಿ, ಚೆಂಡು ಮಲ್ಲಿಗೆ, ಸೀತಾಲ ಬೆಳೆದಿದ್ದಾರೆ. ಗುಲಾಬಿ ಹೂ ಬಿಡಲಾರಂಭಿಸಿದೆ. ಉಳಿದವೆಲ್ಲವೂ ಇನ್ನೂ ಗಿಡಗಳು. ಜಮೀನಿನ ಬೇಲಿಯ ಮೇಲೆ ತೊಂಡೆಕಾಯಿ ಬಳ್ಳಿ ಹಬ್ಬಿಸಿದ್ದಾರೆ.
ನುಗ್ಗೆ ಹಾಕಿದ್ದಾರೆ. 40 ತೆಂಗಿನ ಮರಗಳಿವೆ. ಸೇಬು, ದ್ರಾಕ್ಷಿ, ಬಟರ್ ್ರೂಟ್, ಮೊಸಂಬಿ ಒಂದೊಂದೇ ಗಿಡಗಳಿವೆ. ಇವು ಉತ್ತಮವಾಗಿ ಲಕೊಟ್ಟರೆ ಮುಂದಿನ ಸಲ ಈ ಕೃಷಿಯನ್ನು ಶುರು ಮಾಡಬೇಕೆಂದುಕೊಂಡಿದ್ದಾರೆ. ಸ್ವಲ್ಪ ದೂರದಲ್ಲಿ ಇರುವ ಉಳಿದ 1 ಎಕರೆಯಲ್ಲಿ ಬಾಳೆ, ಹೂ ಕೋಸು ಹಾಕಿದ್ದಾರೆ. ಸೊಪ್ಪುಗಳನ್ನು ಬೆಳೆದು ತಾನೇ ಬೀದಿಬೀದಿ ಸುತ್ತಿ ಮಾರಾಟ ಮಾಡುತ್ತಿದ್ದಾರೆ. ಕೂಲಿಕಾರರನ್ನು ನಂಬಿಕೊಳ್ಳದೆ ತಾವೇ ತಮ್ಮ ದುಡಿಮೆ ಮಾಡುತ್ತಾರೆ. ವಾರ್ಷಿಕವಾಗಿ ಅಂದಾಜು 2 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಲಾಭ ಸಿಗುವ ನಿರೀಕ್ಷೆಯಲ್ಲಿದ್ದಾರೆ.
ಪತ್ನಿ ಕುಸುಮಾ ಅವರ ಪರಿಶ್ರಮವನ್ನು ಗಮಿಸಿದ ಪತಿ ಬಸವರಾಜು ಉದ್ಯೋಗ ಬಿಟ್ಟು ಮತ್ತೆ ಕೃಷಿ ಮಾಡಲು ಮರಳಿದ್ದಾರೆ. ಯಶಸ್ವಿ ಪುರುಷನ ಹಿಂದೆ ಮಹಿಳೆ ಇದ್ದೇ ಇರುತ್ತಾರೆ ಎನ್ನುವ ಹಾಗೆ, ಕೃಷಿಯಲ್ಲಿ ನಷ್ಟ ಅನುಭವಿಸಿದ್ದ ಬಸವರಾಜು ಮತ್ತೆ ಕೃಷಿಯಲ್ಲಿ ತೊಡಗಿಕೊಳ್ಳಲು ಪತ್ನಿ ಕುಸುಮಾ ಉದಾಹರಣೆಯಾಗಿದ್ದಾರೆ.
ಮತ್ತೊಬ್ಬರ ಕೈ ಕೆಳಗೆ ದುಡಿಯುವ ಬದಲು ಸ್ವಯಂ ಉದ್ಯೋಗದಲ್ಲಿ ಪರಿಶ್ರಮ ಹಾಕಬೇಕು. ಕೃಷಿ ಮಾಡೋಣ ಎಂದಾಗ ನನ್ನ ಪತಿ ಬಸವರಾಜು ಬೆಂಬಲ ನೀಡಲಿಲ್ಲ. ಆಗ ನನಗೆ ಹುಟ್ಟಿದ ಹಠ ಕೃಷಿಕಳನ್ನಾಗಿ ಮಾಡಿತು. ಡ್ರಾೃಗನ್ ್ರೂಟ್ ಅನ್ನು ಸಾವಯನ ವಿಧಾನದಲ್ಲಿ ಬೆಳೆಯುತ್ತಿದ್ದೇನೆ. ಟೈಲರಿಂಗ್ ಕೂಡ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಸೇಬು ಬೆಳೆ ಕೃಷಿಯಲ್ಲಿ ಯಶಸ್ಸು ಗಳಿಸಬೇಕೆಂಬ ಗುರಿ ಹೊಂದಿದ್ದೇನೆ.ಕುಸುಮಾ, ರೈತ ಮಹಿಳೆಕೆಂಪಾಲಕಟ್ಟೆ, ಅಮಚವಾಡಿ ಚಾಮರಾಜನಗರ ನಷ್ಟ ಉಂಟಾಗಿದ್ದರಿಂದ ಕೃಷಿ ಮಾಡುವುದನ್ನೇ ಬಿಟ್ಟುಬಿಡಬೇಕೆಂದು ನಿರ್ಧಾರ ಮಾಡಿದ್ದೆ. ಹಾಗಾಗಿ ಮೈಸೂರಿನಲ್ಲಿ ಕೆಲಸಕ್ಕೆ ಸೇರಿದ್ದೆ. ಆದರೆ ನನ್ನ ಪತ್ನಿ ಮತ್ತೆ ಕೃಷಿ ಮಾಡಿ ಯಶಸ್ವಿಯಾಗಿದ್ದಾಳೆ. ಯಾರೋ ಡ್ರಾೃಗನ್ ್ರೂಟ್ ಬೆಳೆಯುತ್ತಿದ್ದಾರೆ ಎಂದು ವಿಡಿಯೋದಲ್ಲಿ ನೋಡಿದಾಗ ಇದೆಲ್ಲಾ ಲಾಭ ತರುತ್ತದೆಯೇ ಎಂಬ ಪ್ರಶ್ನೆ ಮೂಡಿತ್ತು. ಈ ಕೃಷಿಯಲ್ಲಿ ನನ್ನ ಪತ್ನಿಯೇ ಯಶಸ್ಸು ಗಳಿಸಿ ಮಾದರಿಯಾದಳು.ಬಸವರಾಜು, ರೈತ ಮಹಿಳೆ ಕುಸುಮಾ ಪತಿಕೆಂಪಾಲಕಟ್ಟೆ, ಅಮಚವಾಡಿ ಚಾಮರಾಜನಗರ