Transparent umbrella under heavy rain against water drops splash background. Rainy weather concept. 
ಜಿಲ್ಲೆ

ನಗರದಲ್ಲಿ ಭರ್ಜರಿ ಮಳೆ

ಕಿರಣ್ ಮಾದರಹಳ್ಳಿ

ಚಾಮರಾಜನಗರ : ನಗರ ಹಾಗೂ ತಾಲೂಕಿನ ವಿವಿಧೆಡೆ ಶುಕ್ರವಾರ ಸಂಜೆಯ ನಂತರ ಗುಡುಗು, ಸಿಡಿಲು ಸಹಿತ ಭರ್ಜರಿ ಮಳೆಯಾಯಿತು.

ನಗರದಲ್ಲಿ ಸಂಜೆಯವರೆಗೂ ಮೋಡ ಕವಿದ ವಾತಾವರಣ ಇತ್ತು, ಆದರೆ ಸಂಜೆಯ ನಂತರ ಗುಡುಗು ಸಹಿತ ಭಾರಿ ಮಳೆಯಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವಂತಾಯಿತು. ಸಂತೇಮರಹಳ್ಳಿ ರಸ್ತೆಯಲ್ಲಿರುವ ರೇಷ್ಮೆ ಮಾರುಕಟ್ಟೆಯ ಮುಂಭಾಗದ ಚರಂಡಿ ನೀರು, ಕಸಕಡ್ಡಿಯ ಸಮೇತ ಮುಖ್ಯ ರಸ್ತೆಗೆ ನುಗ್ಗಿದ ಪರಿಣಾಮ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ಗುರುವಾರ ಸುರಿದ ಭಾರಿ ಮಳೆಗೆ ಸಾಕಷ್ಟು ಚರಂಡಿ ಕಸ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಹರಡಿಕೊಂಡಿತ್ತು. ನಗರದ ವಿವಿಧ ಬಡಾವಣೆ ರಸ್ತೆಗಳು, ಪ್ರಮುಖ ವೃತ್ತಗಳು ಮಳೆ ನೀರಿನಿಂದ ತುಂಬಿದ್ದವು, ಸಾರ್ವಜನಿಕರ ಸಂಚಾರಕ್ಕೆ ಹಾಗೂ ವ್ಯಾಪಾರ-ವಹಿವಾಟಿಗೆ ಸಂಜೆಯ ನಂತರ ತೊಡಕು ಉಂಟಾಯಿತು.

ತಾಲೂಕಿನ ಚಂದಕವಾಡಿ, ಕಾಗಲವಾಡಿ, ಆಲೂರು, ದೊಡ್ಡರಾಯಪೇಟೆ, ನಾಗವಳ್ಳಿ, ನಲ್ಲೂರು, ಹರದನಹಳ್ಳಿ ಹಾಗೂ ಇನ್ನಿತರ ಗ್ರಾಮಗಳಲ್ಲೂ ಶುಕ್ರವಾರ ಮಳೆ ಬಿರುಸುಗೊಂಡಿತ್ತು. ಮಳೆಯಾಶ್ರಿತ ಪ್ರದೇಶಗಳಲ್ಲಿ 2 ದಿನವೂ ಭರ್ಜರಿಯಾಗಿ ಮಳೆ ಸುರಿಯುತ್ತಿರುವುದರಿಂದ ಕೃಷಿಕರ ಪಾಲಿಗೆ ಆಶಾದಾಯಕವಾಗಿದ್ದರೂ, ಸೂರ್ಯಕಾಂತಿ ಹಾಗೂ ಇನ್ನಿತರ ಬೆಳೆಗಳ ಕಟಾವು ಮಾಡಬೇಕಿದ್ದ ರೈತರ ಪಾಲಿಗೆ ಮಳೆ ನಷ್ಟದ ಭೀತಿ ಉಂಟು ಮಾಡಿತು.