ಚಾಮರಾಜನಗರ: ಚಿರತೆ ದಾಳಿಯಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಬಾಲಕನನ್ನು ಕೊಳ್ಳೇಗಾಲದ ಶಾಸಕ ಎ.ಆರ್.ಕೃಷ್ಣಮೂರ್ತಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ನಗರದ ಹೊರವಲಯದಲ್ಲಿರುವ ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯಳಂದೂರು ತಾಲೂಕಿನ ಮಲ್ಲಿಗಹಳ್ಳಿ ಗ್ರಾಮದ ಹರ್ಷಿತ್(10) ಎಂಬ ಬಾಲಕನನ್ನು ಭೇಟಿ ಮಾಡಿದ ಶಾಸಕರು ಆತನ ಆರೋಗ್ಯ ವಿಚಾರಿಸಿ, ಬಾಲಕನ ತಂದೆ ಶಿವಕುಮಾರ್ ಹಾಗೂ ತಾಯಿ ಜತೆ ಮಾತನಾಡಿ, ನಾವು ನಿಮ್ಮ ಜತೆಗೆ ಇದ್ದೇವೆ ಎಂದು ಧೈರ್ಯ ತುಂಬಿದರು. ಬಳಿಕ ಅರಣ್ಯ ಅಧಿಕಾರಿಗಳು ಹಾಗೂ ವೈದ್ಯರೊಂದಿಗೆ ಮಾತನಾಡಿ, ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ಹಾಗೂ ಚಿಕಿತ್ಸೆಯನ್ನು ನೀಡುವಂತೆ ಸೂಚನೆ ನೀಡಿದರು.
ಮಲ್ಲಿಗಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಚಿರತೆಯೊಂದು ದಾಳಿ ನಡೆಸಿ ಹರ್ಷಿತ್‌ನನ್ನು ಗಾಯಗೊಳಿಸಿತ್ತು. ನಂತರ ಆ ಬಾಲಕನನ್ನು ಸಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್. ಜಯಣ್ಣ, ಪ್ರಭಾರ ಸಿಸಿಎಫ್ ಮಾಲತಿ ಪ್ರಿಯಾ, ಡಿಸಿಎಫ್ ದೀಪಾ ಜೆ ಕಂಟ್ರಾಕ್ಟರ್, ಕೊಳ್ಳೇಗಾಲ ಉಪವಿಭಾಗಧಿಕಾರಿ ಮಹೇಶ್, ಮುಖಂಡ ಬಿ. ಕೆ. ರವಿಕುಮಾರ್, ಚಿಕ್ಕಮಹದೇವು, ಚಂದ್ರು ಜತೆಯಲ್ಲಿದ್ದರು.