ಜಿಲ್ಲೆ

ಸಾಮಾನ್ಯ ಸೌಲಭ್ಯ ಕೇಂದ್ರ ಸ್ಥಾಪನೆ

ಚಾಮರಾಜನಗರ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಕೇಂದ್ರ ಸರ್ಕಾರದ ಕೈಗಾರಿಕಾ ಕ್ಲಸ್ಟರ್ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಒಂದೇ ಬಗೆಯ ಉತ್ಪನ್ನವನ್ನು ತಯಾರಿಸುತ್ತಿರುವ ಕೈಗಾರಿಕಾ ಘಟಕಗಳು, ಕುಶಲಕರ್ಮಿಗಳು ತಮಗೆ ಅವಶ್ಯವಿರುವ ಸಾಮಾನ್ಯ ಸೌಲಭ್ಯ ಕೇಂದ್ರವನ್ನು (ಯೋಜನಾ ಮೊತ್ತ ಗರಿಷ್ಠ 10 ಕೋಟಿ ರೂ.) ಸ್ಥಾಪಿಸಿಕೊಳ್ಳಬಹುದಾಗಿದೆ. ಎಸ್.ಪಿ.ವಿ ವತಿಯಿಂದ ಶೇ.10 ವಂತಿಕೆ ಭರಿಸಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತ ಉದ್ದಿಮೆದಾರರು ನಗರದ ಜಿಲ್ಲಾ ಕೈಗಾರಿಕಾ ಕೇಂದ್ರವನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.