ಜಿಲ್ಲೆ

ಆಹಾರ ಸುರಕ್ಷತಾ ಕ್ರಮಕ್ಕೆ ಅಧಿಕಾರಿಗಳು ಮುಂದಾಗಲಿ

ಚಾಮರಾಜನಗರ: ವಿವಿಧ ಹೋಟೆಲ್ ಹಾಗೂ ಬೀದಿ ಬದಿ ಾಸ್ಟ್‌ುಡ್‌ಗಳಲ್ಲಿ ಆಹಾರ ಸುರಕ್ಷತೆ ಕುರಿತು ಸಂಬಂಧಪಟ್ಟ ಇಲಾಖೆಗಳು ಸೂಕ್ತ ಕ್ರಮ ವಹಿಸಬೇಕು ಎಂದು ಕರ್ನಾಟಕ ಜನಪ್ರಿಯ ವೇದಿಕೆ ಅಧ್ಯಕ್ಷ ಜೆ.ಸಿ.ಇತಿಹಾಸ್ ಆಗ್ರಹಿಸಿದರು.

ಹೋಟೆಲ್‌ಗಳು ಹಾಗೂ ರಸ್ತೆ ಬದಿ ಫಾಸ್ಟ್‌ಫುಡ್‌ಗಳಲ್ಲಿ ಅಶುದ್ಧ ನೀರು, ಬಿಸಿ ಪದಾರ್ಥಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಪಾರ್ಸೆಲ್ ಮಾಡಿಕೊಡುತ್ತಿರುವುದರಿಂದ ಹಾಗೂ ಅಶುಚಿತ್ವದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಈ ಕುರಿತು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಕಲುಷಿತ ನೀರಿನಿಂದಾಗುವ ಕೆಟ್ಟ ಪರಿಣಾಮಗಳು, ಪ್ಲಾಸ್ಟಿಕ್ ಕವರ್ ಮತ್ತು ಇನ್ನಿತರ ಚೀಲಗಳಿಂದ ಆಹಾರ ಪದಾರ್ಥಗಳನ್ನು ಕಟ್ಟುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ರಸ್ತೆ ಬದಿಯಲ್ಲಿ ಮಾಂಸಾಹಾರ ಮಾರಾಟಗಾರರು ಸುರಕ್ಷತೆ ವಹಿಸದಿರುವುದರ ಬಗ್ಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಉಪಾಧ್ಯಕ್ಷ ಎನ್. ನಾಗರಾಜು, ಮಹಿಳಾ ಘಟಕದ ಅಧ್ಯಕ್ಷೆ ಮೇರಿ, ಪದಾಧಿಕಾರಿಗಳಾದ ಉಗ್ರೇಗೌಡ, ಎಂ.ರೂಪೇಶ್, ಮಹದೇವು ಹಾಜರಿದ್ದರು.