ಚಾಮರಾಜನಗರ : ಜಿಲ್ಲೆಯ ವಿವಿಧೆಡೆ ಮದ್ಯ ಅಕ್ರಮ ಮಾರಾಟ ಮಾಡಲು ಸಾಗಣೆ ಮಾಡುತ್ತಿದ್ದವರ ಮೇಲೆ ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿ 4,521 ರೂ. ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಮುಡಿಗುಂಡ ಗ್ರಾಮದಿಂದ ಕುಣಗಳ್ಳಿ ಗ್ರಾಮಕ್ಕೆ ಹೋಗುವ ವರ್ಮ ಕೈಗಾರಿಕೆ ಸಂಸ್ಥೆಯ ತಿರುವಿನ ಬಳಿ ಯಳಂದೂರು ತಾಲೂಕಿನ ಟಿ.ಹೊಸೂರು ಗ್ರಾಮದ ನಿವಾಸಿ ದಾಸೇಗೌಡ ಅವರಿಂದ 1,640 ರೂ. ಮೌಲ್ಯದ 3.6 ಲೀಟರ್ ಮದ್ಯವನ್ನು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಹನೂರು ತಾಲೂಕಿನ ಕಣ್ಣೂರು ಕೇರಿ ಗ್ರಾಮದ ನಿವಾಸಿ ಜ್ಯೋತಿ ಅವರ ದಿನಸಿ ಅಂಗಡಿ ಮೇಲೆ ದಾಳಿ ನಡೆಸಿ 1,041 ರೂ, ಮೌಲ್ಯದ 2.34 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಮಲೆಮಹದೇಶ್ವರ ಬೆಟ್ಟ-ತಾಳಬೆಟ್ಟ ಮುಖ್ಯ ರಸ್ತೆಯಲ್ಲಿರುವ ಆನೆತಲೆದಿಂಬದ ಬಳಿ ಅಕ್ರಮವಾಗಿ ಮಾರಾಟ ಮಾಡಲು ಮದ್ಯ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಂಧಿತರಿಂದ 1,840 ರೂ. ಮೌಲ್ಯದ ಮದ್ಯ ಹಾಗೂ ಬೈಕ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.