ಜಿಲ್ಲೆ

ಸೆ.29 ರಂದು ಮಹಿಷ ಮಂಡಲೋತ್ಸವ ಕಾರ್ಯಕ್ರಮ

ಎ.ಎಸ್.ಮಣಿಕಂಠ

ಚಾಮರಾಜನಗರ: ವಿವಿಧ ಸಂಘಟನೆ ವತಿಯಿಂದ ಮೈಸೂರಿನಲ್ಲಿ ಸೆ.29 ರಂದು ಮೈಸೂರಿನಲ್ಲಿ ಆಯೋಜಿಸಿರುವ ಮಹಿಷ ಮಂಡಲೋತ್ಸವ ಹಾಗೂ ರಾಜ್ಯದ ಮೂಲ ನಿವಾಸಿಗಳಿಂದ ಮಹಿಷ ಸಾಂಸ್ಕೃತಿಕ ಹಬ್ಬಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡ ಕೆ.ಎಂ.ನಾಗರಾಜು ಮನವಿ ಮಾಡಿದರು.

ಮೈಸೂರಿನಿಂದ ಅಂದು ಬೆಳಗ್ಗೆ 8.30ಕ್ಕೆ ಬೈಕ್ ಜಾಥಾದ ಮೂಲಕ ಚಾಮುಂಡಿ ಬೆಟ್ಟಕ್ಕೆ ತೆರಳಿ ಅಲ್ಲಿರುವ ಮಹಿಷ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಾಗುವುದು. ಬಳಿಕ 10.30ಕ್ಕೆ ಮೈಸೂರಿನ ಪುರಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಹಿಷ ಎಂಬ ಹೆಸರಿನಿಂದ ಮೈಸೂರು ಎಂಬ ಹೆಸರು ಬಂದಿದೆ. ಮೈಸೂರು ಸಂಸ್ಕೃತಿಕ, ಪರಂಪರೆ ಉಳಿಸುವ ಅಗತ್ಯವಿದೆ. ಪ್ರತಿ ವರ್ಷದಂತೆ ಈ ಬಾರಿಯೂ ವಿಜೃಂಭಣೆಯಿಂದ ಮಹಿಷ ಮಂಡಲೋತ್ಸವ ಆಚರಣೆ ಮಾಡಲಾಗುವುದು. ಕಳೆದ ಬಾರಿ 30ಸಾವಿರ ಜನರು ಸೇರಿದ್ದು ವಿಚಾರಸಂಕಿರಣ ಆಯೋಜಿ ಸಲಾಗಿತ್ತು. ಈ ಬಾರಿಯೂ 30ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಗೋಷ್ಠಿಯಲ್ಲಿ ಸಂಘಸೇನಾ, ದಸಂಸ ಮುಖಂಡ ಯರಿಯೂರು ರಾಜಣ್ಣ, ಬಂಗಾರಸ್ವಾಮಿ, ಶಿವಣ್ಣ, ಸುಭಾಷ್ ಮಾಡ್ರಹಳ್ಳಿ, ಪರಶಿವಮೂರ್ತಿ ಹಾಜರಿದ್ದರು.