ಜಿಲ್ಲೆ

2 ಸಾವಿರ ಉದ್ಯೋಗ ಸೃಷ್ಟಿ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಮುಂದಿನ 1 ವರ್ಷದಲ್ಲಿ 2000 ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಮಹಮ್ಮದ್ ಅಕ್ಬರ್ ಮಾತನಾಡಿದರು.


ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಉದ್ಯೋಗ ಇಲಾಖೆ ಮತ್ತು ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದ ಎಲ್ಕಿಚ್ ಸಹಯೋಗದಲ್ಲಿ ಗುರುವಾರ ಉದ್ಯೋಗ ನೇಮಕಾತಿಗಾಗಿ ಆಯೋಜಿಸಿದ್ದ ನೇರ ಸಂದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಾಕಷ್ಟು ಕೈಗಾರಿಕೆಗಳು ಸ್ಥಾಪನೆಯಾಗುತ್ತಿದೆ. ಉದ್ಯೋಗ ವಿನಿಮಯ ಕಚೇರಿ, ಹಲವು ಖಾಸಗಿ ಕಂಪನಿಗಳು ಹಾಗೂ ನಿರುದ್ಯೋಗಿ ಯುಕರ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಿದೆ. ಯುವಕ-ಯುವತಿಯರ ವಿದ್ಯಾರ್ಹತೆ ಹಾಗೂ ಕೌಶಲ್ಯದ ಆಧಾರದ ಮೇಲೆ ಹಲವು ಉದ್ಯೋಗಗಳನ್ನು ಕಲ್ಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕೈಗಾರಿಕೆ ಹಾಗೂ ಕಂಪನಿಗಳು ಜಿಲ್ಲೆಗೆ ಬರಲಿದ್ದು ಸ್ಥಳೀಯ ನಿರುದ್ಯೋಗಿ ಯುವಕರಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.