ಚಾಮರಾಜನಗರ: 2024-25ನೇ ಸಾಲಿನ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಒಟ್ಟು 14 ಶಿಕ್ಷಕರು ಆಯ್ಕೆಯಾಗಿದ್ದು, ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸೆ.23ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕೃಷ್ಣಮೂರ್ತಿ (ಸರ್ಕಾರಿ ಕಿರಿಯ ಪ್ರಾಥಮಿಕ ಅರ್ಬನ್ ಏರಿಯಾ, ಚಾಮರಾಜನಗರ), ಎಚ್.ಸಿ ಮಮತಾ (ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಗರಗನಹಳ್ಳಿ, ಗುಂಡ್ಲುಪೇಟೆ ತಾಲೂಕು) ಮಣಿ (ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹುಣಸೇಪಾಳ್ಯ, ಹನೂರು ತಾಲೂಕು) ಎಚ್.ಮಮತ (ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಸತ್ತೇಗಾಲ ಅಗ್ರಹಾರ, ಕೊಳ್ಳೇಗಾಲ ತಾಲೂಕು) ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಿ.ಎಸ್. ಮಹದೇವಸ್ವಾಮಿ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಯಾನಗಳ್ಳಿ, ಚಾಮರಾಜನಗರ ತಾಲೂಕು) ದೊಡ್ಡಬಸವಯ್ಯ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬನ್ನಿತಾಳಪುರ, ಗುಂಡ್ಲುಪೇಟೆ ತಾಲೂಕು) ಕೆ. ಗೋವಿಂದ, (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೂಗ್ಯಂ, ಹನೂರು ತಾಲೂಕು) ಮುರುಳಿರಾಜು (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಡಿಗುಂಡ, ಕೊಳ್ಳೇಗಾಲ), ಆರ್. ಸುರೇಶ್ ಕುಮಾರ್ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವೈ.ಕೆ.ಮೋಳೆ, ಯಳಂದೂರು ತಾಲೂಕು) ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರೌಢಶಾಲಾ ವಿಭಾಗದಲ್ಲಿ ಸಿ. ಸಿದ್ದರಾಜು (ಸರ್ಕಾರಿ ಪ್ರೌಢಶಾಲೆ, ಆಲೂರು, ಚಾಮರಾಜನಗರ ತಾಲೂಕು), ರಂಗೇಗೌಡ, (ಸರ್ಕಾರಿ ಪ್ರೌಢಶಾಲೆ, ಅಣ್ಣೂರುಕೇರಿ, ಗುಂಡ್ಲುಪೇಟೆ ತಾಲೂಕು), ಎಂ ಶಾಂತರಾಜು (ಸರ್ಕಾರಿ ಪ್ರೌಢಶಾಲೆ, ಕೊಳ್ಳೇಗಾಲ ಪಟ್ಟಣ), ಡಾ. ಮಹೇಂದ್ರ, (ಸರ್ಕಾರಿ ಪ್ರೌಢಶಾಲೆ, ಗೋಪಿನಾಥಂ, ಹನೂರು ತಾಲೂಕು), ಆರ್. ಗುರುಮೂರ್ತಿ (ಸರ್ಕಾರಿ ಪ್ರೌಢಶಾಲೆ, ಆದರ್ಶ ವಿದ್ಯಾಲಯ, ಮೆಲ್ಲಹಳ್ಳಿ, ಯಳಂದೂರು ತಾಲೂಕು) ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.