ಜಿಲ್ಲೆ

ಕೆರೆ ಅಭಿವೃದ್ಧಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ

ಚಾಮರಾಜನಗರ : ತಾಲೂಕಿನ ಹೊಂಡರಬಾಳು ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ 93 ಲಕ್ಷ ರೂ. ವೆಚ್ಚದಲ್ಲಿ ಕೆರೆಯ ಸಮಗ್ರ ಅಭಿವೃದ್ಧಿಗೆ ಎಂಎಸ್‌ಐಎಲ್ ಅಧ್ಯಕ್ಷ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುರುವಾರ ಭೂಮಿಪೂಜೆ ನೆರವೇರಿಸಿದರು.

ಒಂದು ಗ್ರಾಮದ ಕೆರೆ ಇಡೀ ಗ್ರಾಮದ ಜೀವಾಳವೇ ಆಗಿರುತ್ತದೆ. ಕೆರೆ ತುಂಬಿದಾಗ ಸುತ್ತಮುತ್ತಲ ಗ್ರಾಮಗಳ ಜಮೀನುಗಳಲ್ಲಿ ಅಂತರ್ಜಲ ಹೆಚ್ಚಳವಾಗುತ್ತದೆ. ಜತೆಗೆ ಕುಡಿವ ನೀರಿನ ಸಮಸ್ಯೆ ನೀಗಲಿದೆ ಎಂದರು. ಕೆರೆ ಏರಿ ಬಲವರ್ಧನೆ, ಕೋಡಿಹಳ್ಳ, ಸಾಣೆಹಳ್ಳದ ಜಂಗಲ್‌ಕಟಿಂಗ್, ಕೋಡಿಹಳ್ಳದಲ್ಲಿ ಬಾಕ್ಸ್ ಲೈನಿಂಗ್ ಕಾಮಗಾರಿ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಸೇರಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ, ರೈತರಿಗೆ ಅನೂಕೂಲ ಮಾಡಿಕೊಡಬೇಕು ಎಂದು ಸೂಚಿಸಿದರು.

ಗ್ರಾಪಂ ಸದಸ್ಯ ಚಂದ್ರಕಲಾ, ಲೋಕೇಶ್, ಮಹೇಶ್, ಮುಖಂಡರಾದ ನಾರಾಯಣ, ನಲ್ಲೂರು ಸೋಮೇಶ್, ಮಹದೇವಸ್ವಾಮಿ, ಲಿಂಗರಾಜು, ಬಸವಣ್ಣ ಇತರರು ಹಾಜರಿದ್ದರು.