ಚಾಮರಾಜನಗರ : ತಾಲೂಕಿನ ನಲ್ಲೂರು ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷರಾಗಿ ಎನ್.ಬಿ.ಸುರೇಶ್, ಉಪಾಧ್ಯಕ್ಷರಾಗಿ ಮಹದೇವಯ್ಯ ಅಯ್ಕೆಯಾಗಿದ್ದಾರೆ.
ಗ್ರಾಮದಲ್ಲಿರುವ ಸಂಘದ ಕಚೇರಿಯಲ್ಲಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎನ್.ಬಿ.ಸುರೇಶ್, ಚಂದ್ರಮ್ಮ, ಪರಶಿವಮೂರ್ತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಹದೇವಯ್ಯ ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣದಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಚಂದ್ರಮ್ಮ 2 ಮತ, ಎನ್.ಬಿ.ಸುರೇಶ್ 10 ಮತಗಳನ್ನು ಪಡೆದು ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸುಭಾಷಿಣಿ ಕಾರ್ಯನಿರ್ವಹಿಸಿದರು.
ನಿರ್ದೇಶಕ ಪುಟ್ಟರಾಜು, ಬಸವರಾಜು,ನಾಗೇಂದ್ರ, ಮಲ್ಲಪ್ಪ, ನಟರಾಜು, ಪರಶಿವ, ಸಿದ್ದರಾಜು, ಬಿ.ಸಿದ್ದರಾಜು,ಸಾವಿತ್ರಮ್ಮ, ಮುಖ್ಯ ಕಾರ್ಯಾನಿರ್ವಾಹಕ ಆನಂದ್ ಉಪಸ್ಥಿತರಿದ್ದರು.