ಜಿಲ್ಲೆ

ಕಾಣೆಯಾಗಿರುವ ತಾಯಿ, ಮಗು ಪತ್ತೆಗೆ ಮನವಿ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ತಾಯಿ ಮತ್ತು ಮಗಳು ಕಾಣೆಯಾಗಿದ್ದಾರೆ.
ಗ್ರಾಮದ ನಿವಾಸಿ ನಂದಿನಿ(26) ಮತ್ತು ಮಗಳು ಅರ್ಪಿತಾ(7) ಎಂಬುವರು ಕಾಣೆಯಾಗಿದ್ದು ಇವರ ಪತ್ತೆಗೆ ಸಹಕರಿಸುವಂತೆ ಕೋರಲಾಗಿದೆ. ನಂದಿನಿ 5 ಅಡಿ ಎತ್ತರ, ದುಂಡುಮುಖ, ಎಣ್ಣೆಗೆಂಪು ಮೈ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಅರ್ಪಿತಾ 3.5 ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಮೈ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾಳೆ.

ಇವರ ಸುಳಿವು ದೊರೆತಲ್ಲಿ ಯಳಂದೂರು ಪೊಲೀಸ್ ಠಾಣೆ ದೂ.ಸಂ. 08226-240028, ಆರಕ್ಷಕ ಉಪನಿರೀಕ್ಷಕರ ಮೊ.ಸಂ 9480804649, ಜಿಲ್ಲಾ ಕಂಟ್ರೋಲ್ ರೂಂ ದೂ.ಸಂ 08226-222383 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.