ಚಾಮರಾಜನಗರ: ನಗರದ ಪ್ರವಾಸಿ ಮಂದಿರದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ನೂತನ ಸಿಂಡಿಕೇಟ್ ಸದಸ್ಯರಾದ ಮಹದೇವಸ್ವಾಮಿ ಕಾಗಲವಾಡಿ ಅವರಿಗೆ ದಲಿತ ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನಿಸಲಾಯಿತು.
ಹಿರಿಯ ಹೋರಾಟಗಾರ ಮುಳ್ಳೂರು ಶಿವಮಲ್ಲು, ಹಿರಿಯ ಸಾಹಿತಿ ಮಂಜು ಕೋಡಿಉಗನೆ, ದಸಾಪ ಜಿಲ್ಲಾಧ್ಯಕ್ಷ ಬಿ.ಗುರುರಾಜು ಯರಗನಹಳ್ಳಿ, ಖಜಾಂಚಿ ಡಾ.ಕುಮಾರ್, ಯೋಗೇಶ್ ಚಿಕ್ಕತುಪ್ಪೂರು, ಆನಂದರಾಜು, ಡಾ.ನಂಜರಾಜು ಹೊಂಗನೂರು, ಡಾ.ಮಹದೇವಮೂರ್ತಿ, ಡಾ.ನಿಂಗರಾಜು, ಡಾ.ಮಹೇಶ್ ಕೋಡಿಉಗನೆ ಹಾಜರಿದ್ದರು.