ಜಿಲ್ಲೆ

ನಾಳೆ ಉಲ್ಲಾಸ ನರ್ತನ ಪ್ರದರ್ಶನ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಶಾಂತಲಾ ಕಲಾವಿದರ ತಂಡದ ವತಿಯಿಂದ ಸೆ.15ರಂದು ನಗರದಲ್ಲಿ ಏಕವ್ಯಕ್ತಿ ರಂಗ ಪ್ರಯೋಗ ನಡೆಯಲಿದೆ.
ನಗರದ ಜಿಲ್ಲಾಡಳಿತ ಭವನದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಮೈಸೂರಿನ ನೃತ್ಯ ಕಲಾ ಪರಿಷತ್ತಿನಿಂದ ‘ಉಲ್ಲಾಸ ನರ್ತನ’ ಎಂಬ ವಿವಿಧ ಪ್ರಕಾರದ ನೃತ್ಯ ಕಾರ್ಯಕ್ರಮ ನಡೆಯಲಿದೆ. ಧೀನಬಂಧು ಶಾಲೆಯ ಜಿ.ಎಸ್.ಜಯದೇವ್ ಉದ್ಘಾಟನೆ ಮಾಡುವರು.

ಬಿಎಸ್‌ವಿ ಫೌಂಡೇಷನ್‌ನ ಬಿ.ವಿ.ವೆಂಕಟನಾಗಪ್ಪ ಶೆಟ್ಟಿ, ಶಾಂತಲಾ ಕಲಾವಿದರ ತಂಡದ ಕೆ.ವೆಂಕಟರಾಜು ಉಪಸ್ಥಿತರಿರುವರು. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಬ್ರಹಾಂ ಡಿ ಸಿಲ್ವ ಅವರನ್ನು ಸನ್ಮಾನಿಸಲಾಗುವುದು. ಭಾರತ ನೃತ್ಯ ಕಲಾ ಪರಿಷತ್ತಿನ ಅಧ್ಯಕ್ಷತೆ ಉಷಾ ವೇಣುಗೋಪಾಲ್ ಅಧ್ಯಕ್ಷತೆ ವಹಿಸುವರು. ಸಂಜೆ 6.30ಕ್ಕೆ ಪಠ್ಯ-ರೇಣುಕಾ ನಿಡಗುಂದಿ, ನಟರಾಜ್ ಹೊನ್ನವಳ್ಳಿ-ರಂಗಪಠ್ಯ-ವಿನ್ಯಾಸ-ನಿರ್ದೇಶನವಿರುವ ‘ಮೈ ತೆನ್ನು ಫಿರ್ ಮಿಲಾಂಗಿ’ ಕನ್ನಡ ಏಕವ್ಯಕ್ತಿ ರಂಗಪ್ರಯೋಗ ನಾಟಕ ನಡೆಯಲಿದೆ. ನಾಟಕ ಪ್ರದರ್ಶನಕ್ಕೆ ಉಚಿತ ಪ್ರವೇಶವಿರಲಿದೆ ಎಂದು ಪ್ರಕಟಣೆ ತಿಳಿಸಿದೆ.