ಜಿಲ್ಲೆ

ಸಂಭ್ರಮದಿಂದ ಜರುಗಿದ ಗೌರಿಗಣೇಶ ಹಬ್ಬ

ಎ.ಎಸ್.ಮಣಿಕಂಠ

ಚಾಮರಾಜನಗರ: ಜಿಲ್ಲೆಯಾದ್ಯಂತ ಹಿಂದೂಗಳ ಪವಿತ್ರ ಹಬ್ಬವಾದ ಗೌರಿಗಣೇಶ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಣೆ ಮಾಡಲಾಯಿತು.

ನಗರದ ವಿವಿಧ ಬಡಾವಣೆಗಳಲ್ಲಿ ಗಣೇಶೋತ್ಸವ ಆಯೋಜಿಸುವ ಹಲವು ಸಂಘ ಸಂಸ್ಥೆಗಳ ಮುಖಂಡರು, ಭಕ್ತಾಧಿಗಳು, ಸಾರ್ವಜನಿಕರು ತಮ್ಮ ಬಡಾವಣೆಗಳಲ್ಲಿ ಹಾಗೂ ಮನೆಗಳಲ್ಲಿ ಗೌರಿ-ಗಣೇಶನನ್ನು ಒಟ್ಟಿಗೆ ಪ್ರತಿಷ್ಠಾಪಿಸುವ ಮೂಲಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಹಬ್ಬವನ್ನು ಬರಮಾಡಿಕೊಂಡರು. ಹಲವು ಮಹಿಳೆಯರು ಗೌರಿ ಹಬ್ಬದ ಪ್ರಯುಕ್ತ ಬಾಗಿನ ನೀಡಿದರು. ಗ್ರಾಮೀಣ ಪ್ರದೇಶದಲ್ಲೂ ಜನರು ಗ್ರಾಮದ ಪ್ರಮುಖ ಬೀದಿಗಳಲ್ಲಿ, ಹಲವು ದೇವಾಲಯಗಳ ಮುಂಭಾಗ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಂಭ್ರಮಿಸಿದರು. ಸಾಕಷ್ಟು ದೇವಾಯಗಳಲ್ಲಿ ವಿಶೇಷ ಪೂಜಾಕೈಂಕರ್ಯಗಳು ನೆರವೇರಿದವು.

ನಗರದ ರಥದ ಬೀದಿಯಲ್ಲಿ ಶ್ರೀವಿದ್ಯಾಗಣಪತಿ ಮಂಡಳಿ ವತಿಯಿಂದ ಶ್ರೀ ಅಯೋಧ್ಯೆ ಗಣಪತಿಮೂರ್ತಿ ಪ್ರತಿಷ್ಠಾಪನ ಮಹೋತ್ಸವ ಅರ್ಥಪೂರ್ಣವಾಗಿ ನೆರವೇರಿತು. ಸುಮಾರು 7 ಅಡಿ ಎತ್ತರವಾಗಿರುವ ಶ್ರೀ ಅಯೋಧ್ಯೆ ಗಣಪತಿಯನ್ನು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ, ಅಭಿಜಿತ್ ಮೂಹೂರ್ತದಲ್ಲಿ ಪ್ರತಿಷ್ಠಾಪಿಸಲಾಯಿತು.

ಈ ಸಂದರ್ಭದಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಶ್ರೀವಿದ್ಯಾಗಣಪತಿ ಮಂಡಳಿ ವತಿಯಿಂದ ಗೌರಿ-ಗಣೇಶ ಹಬ್ಬದ ಪ್ರಯುಕ್ತ ನಗರದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನಾ ಪೂಜಾ ಕಾರ್ಯಕ್ರಮ ಹಲವಾರು ವರ್ಷಗಳಿಂದ ಸೌಹಾರ್ದತೆ ನಡೆದುಕೊಂಡು ಬಂದಿದೆ. ಈ ವರ್ಷವೂ ಕೂಡ ವಿಜೃಂಭಣೆಯಿಂದ ಭಕ್ತಿಯಪೂರ್ವಕವಾಗಿ ನಡೆಯಲಿ ಎಂದು ಆಶಿಸಿದರು.

ಶ್ರೀ ವಿದ್ಯಾ ಗಣಪತಿ ಮಂಡಳಿ ಅಧ್ಯಕ್ಷ ಸುಂದರರಾಜ್ ಮಾತನಾಡಿ, ಗೌರಿ-ಗಣೇಶ ಹಬ್ಬವನ್ನು ನಾಡಿನ ಸಂಸ್ಕೃತಿ, ಭಾವೈಕ್ಯತೆ ಪ್ರತೀಕವಾಗಿ ಆಚರಿಸಲಾಗುತ್ತಿದೆ. ವಿದ್ಯಾ ಗಣಪತಿ ಮಂಡಳಿ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯು ನಗರದ ಎಲ್ಲ ಕೋಮಿನ ಮುಖಂಡರ ಸಹಕಾರದಲ್ಲಿ ವಿಶೇಷವಾಗಿ ಶ್ರೀ ಅಯೋಧ್ಯಾ ಗಣಪತಿಮೂರ್ತಿ ಪ್ರತಿಷ್ಠಾಪಿಸಲಾಗಿದೆ ಎಂದರು.

ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾಹುಡೇದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಮುಸ್ಲಿಂ ಧರ್ಮ ಗುರುಗಳು, ಮುಖಂಡರು, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲಪುರನಂದೀಶ್ , ನಗರಸಭಾ ಮಾಜಿ ಅಧ್ಯಕ್ಷ ಸಿ.ಎಸ್.ಸುರೇಶ್ ನಾಯಕ, ಸದಸ್ಯ ಸುದರ್ಶನ್ ಗೌಡ, ಮಾಜಿ ಸದಸ್ಯ ಗಣೇಶ ದೀಕ್ಷಿತ್, ಮಂಜುನಾಥ್ ಗೌಡ, ಬಾಲಸುಬ್ರಹ್ಮಣ್ಯ, ನಿಜಗುಣರಾಜು, ಶ್ರೀವಿದ್ಯಾಗಣಪತಿ ಮಂಡಳಿ ಪ್ರಧಾನ ಕಾರ್ಯದರ್ಶಿಗಳಾದ ವಿರಾಟ್ ಶಿವು, ಮಹೇಶ್, ಕಾರ್ಯಾಧ್ಯಕ್ಷ ಶಿವಣ್ಣ, ಬುಲೆಟ್‌ಚಂದ್ರು ಪಿ.ವೃಷಬೇಂದ್ರಪ್ಪ, ಮೂಡ್ನಾಕೂಡುಪ್ರಕಾಶ್, ಪ್ರವೀಣ್, ಬಂಗಾರನಾಯಕ, ಶಾಂತಮೂರ್ತಿ ಕುಲಗಾಣ ಮಹೇಶ್, ಕೃಷ್ಣ, ಸಿ.ವಿ.ಮಣಿಕಂಠ , ಬಲವೀರ್ ಸಿಂಗ್, ಹೇಮಂತ್, ಕಾರ್ತಿಕ್,ನಾಗೇಂದ್ರ ಬಾಬು ಶಂಕರ್, ರಾಘವೇಂದ್ರ, ವೀರೇಂದ್ರ, ರಾಮು ಇತರರು ಹಾಜರಿದ್ದರು.