ಜಿಲ್ಲೆ

ಕೆರೆಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆ

ಎ.ಎಸ್.ಮಣಿಕಂಠ

ಚಾಮರಾಜನಗರ: ತಾಲೂಕಿನ ತಮ್ಮಡಹಳ್ಳಿ ಗ್ರಾಮದ ಕೆರೆಯಲ್ಲಿ ಭಾನುವಾರು ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಉಡಿಗಾಲ ಗ್ರಾಮದ ವೆಂಕಟೇಶ್(45) ಮೃತ ದುರ್ದೈವಿ. ಗೌರಿ ಗಣೇಶ ಹಬ್ಬದ ದಿನ ಕೆರೆಯಲ್ಲಿ ಸ್ನಾನ ಮಾಡಬೇಕೆಂದು ತೆರಳಿದ್ದು, ಈ ದುರ್ಘಟನೆ ಸಂಭವಿಸಿದೆ.

ಮೃತ ವ್ಯಕ್ತಿ ಬಟ್ಟೆಯನ್ನು ಒಗೆದು ಸ್ನಾನ ಮಾಡಲು ಕೆರೆಗೆ ಇಳಿದ ವೇಳೆ ಕಾಲು ಜಾರಿ ದೊಡ್ಡಗುಂಡಿಗೆ ಬಿದ್ದು ಮೇಲೆ ಬರಲಾರದೇ ಅಸುನೀಗಿದ್ದಾನೆ. ಕೆರೆಯ ಮುಂಭಾಗದಲ್ಲೇ ಅಪಾಯ ಸ್ಥಳ ಎಂಬ ನಾಮಫಲಕ ಅಳವಡಿಸಿದ್ದರೂ, ಅನೇಕ ಜನರು ಪ್ರವಾಸಿ ತಾಣ ಎಂದು ತಿಳಿದುಕೊಂಡು ಈಜಲು ತಮ್ಮ ಕುಟುಂಬದೊಂದಿಗೆ ಈ ಕೆರೆಗೆ ಬರುತ್ತಾರೆ. ಆದ್ದರಿಂದ, ಕೆರೆಯ ಸುತ್ತ ಬೇಲಿ ಅಳವಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇನ್ನು ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಮೇಲಕ್ಕೆತ್ತಿ ಮುಂದಿನ ಕ್ರಮ ಕೈಗೊಂಡಿದ್ದಾರೆ.