ಜಿಲ್ಲೆ

ಸರ್ವೆಪಲ್ಲಿ ರಾಧಾಕೃಷ್ಣ ಎಲ್ಲರಿಗೂ ಆದರ್ಶ

ಚಾಮರಾಜನಗರ: ಸಮಾಜದಲ್ಲಿ ಶಿಕ್ಷಣ ವೃತ್ತಿಗೆ ಬಹಳ ಗೌರವವಿದ್ದು, ಶಿಕ್ಷಕರ ವೃತ್ತಿ ಅತ್ಯಂತ ಶೇಷ್ಟವಾದದ್ದು, ಅಂತಹ ವೃತ್ತಿಯಲ್ಲಿದ್ದ, ಸರ್ವಪಲ್ಲಿ ರಾಧಾಕೃಷ್ಣ ಅವರನ್ನು ಎಲ್ಲರಿಗೂ ಮಾರ್ಗದರ್ಶಕರು ಎಂದು ಎಂಎಸ್‌ಐಎಲ್ ಅಧ್ಯಕ್ಷ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ ಬಣ್ಣಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸರ್ವೆಪಲ್ಲಿ ಡಾ.ರಾಧಾ ಕೃಷ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. ರಾಧಾಕೃಷ್ಣನ್ ಅವರು ಅತ್ಯುತ್ತಮ ಶಿಕ್ಷಕರಾಗಿದ್ದರು. ತಮ್ಮ ಬದುಕಿನ ಮೂಲಕ ಶಿಕ್ಷಕ ವೃತ್ತಿಯ ಮಹತ್ವವನ್ನು ಜಗತ್ತಿಗೆ ತಿಳಿಸಿಕೊಟ್ಟರು. ಅವರ ಜೀವನಕ್ರಮ ಶಿಕ್ಷಕರಿಗೆ ಇರುವ ಅಪಾರ ಜವಾಬ್ದಾರಿಯನ್ನು ಹೇಳುತ್ತದೆ. ಶಿಕ್ಷಕರ ವೃತ್ತಿ ಅತ್ಯಂತ ಶೇಷ್ಠವಾಗಿದ್ದು, ವೃತ್ತಿ ಧರ್ಮಪಾಲನೆಯಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಗುರುತರ ಜವಾಬ್ದಾರಿಯನ್ನು ಡಾ. ರಾಧಾಕೃಷ್ಣನ್ ಸಮರ್ಥವಾಗಿ ನಿಭಾಯಿಸುವ ಜತೆಗೆ ನನ್ನ ಹುಟ್ಟುಹಬ್ಬವನ್ನು ಆಚರಣೆ ಮಾಡುವ ಬದಲು ಅಂದು ಶಿಕ್ಷಕರ ದಿನವನ್ನಾಗಿ ಆಚರಣೆ ಮಾಡುವಂತೆ ಹೇಳಿದ ಮಹಾನ್ ಪುರುಷ ಎಂದು ಬಣ್ಣಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್. ಗುರುಸ್ವಾಮಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ಎಪಿಎಂಸಿ ಅಧ್ಯಕ್ಷ ಸೋಮೇಶ್, ನಿರ್ದೇಶಕ ಆಲೂರು ಪ್ರದೀಪ್, ತಾ.ಪಂ. ಮಾಜಿ ಸದಸ್ಯರಾದ ಎಸ್.ರಾಜು, ಪುಟ್ಟಸ್ವಾಮಿ, ಮುಖಂಡರಾದ ಎಎಚ್‌ಎನ್ ಖಾನ್, ಪಿ.ರಾಜಣ್ಣ, ಕಾಗಲವಾಡಿ ಚಂದ್ರು, ಪುಟ್ಟಸ್ವಾಮಿ, ಅರುಣ್‌ಕುಮಾರ್, ಅಯೂಬ್‌ಖಾನ್, ಕರಿನಂಜನಪುರಸ್ವಾಮಿ ಮತ್ತು ಇತರರು ಇದ್ದರು.