ಜಿಲ್ಲೆ

2.90 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ನಾಶ

ಎ.ಎಸ್.ಮಣಿಕಂಠ

ಚಾಮರಾಜನಗರ: ಚಾ.ನಗರ ವಲಯ ವ್ಯಾಪ್ತಿಯಲ್ಲಿ ಚುನಾವಣೆ ಸಂದರ್ಭದಲ್ಲಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಯತ್ನಿಸುತ್ತಿದ್ದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಪ್ತಿ ಮಾಡಿದ್ದ 2.90 ಲಕ್ಷ ರೂ. ಮೌಲ್ಯದ ಮದ್ಯವನ್ನು ಮಂಗಳವಾರ ನಾಶಪಡಿಸಲಾಯಿತು.

ನಗರದ ಹೊರವಲಯದಲ್ಲಿ ಅಬಕಾರಿ ಇಲಾಖೆಯ ಉಪ ವಿಭಾಗದ ಅಧೀಕ್ಷಕ ಎಂ.ಡಿ. ಮೋಹನ್‌ಕುಮಾರ್ ನೇತೃತ್ವದಲ್ಲಿ 387 ಲೀಟರ್ ಮದ್ಯ ಹಾಗೂ 655 ಲೀಟರ್ ಬಿಯಾರ್ ಮತ್ತು 6.875 ಲೀಟರ್ ಬಕಾರ್ಡಿಯನ್ನು ಜಪ್ತಿ ಮಾಡಿದ್ದು, ಈ ಎಲ್ಲಾ ಮದ್ಯವನ್ನು ನೆಲಕ್ಕೆ ಸುರಿಯುವ ಮೂಲಕ ನಾಶಪಡಿಸಲಾಯಿತು.

ಅಬಕಾರಿ ಮತ್ತು ಪೊಲೀಸ್ ಇಲಾಖೆಯ ಕಾರ್ಯಚರಣೆ ಸಂದರ್ಭದಲ್ಲಿ ಈ ಮದ್ಯವನ್ನು ಜಪ್ತಿ ಮಾಡಿ, ಪ್ರಕರಣ ದಾಖಲು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಚಾ.ನಗರ ವಲಯ ಅಬಕಾರಿ ನಿರೀಕ್ಷಕ ಸಿ.ಎಂ. ಮಹದೇವ, ಉಮಾಶಂಕರ್, ಕೆಲ್ಲಂಬಳ್ಳಿ ಗ್ರಾಮ ವೃತ್ತ ಅಡಳಿತಾಧಿಕಾರಿ ರಮೇಶ್, ಪಾನಿಯ ನಿಗಮದ ವ್ಯವಸ್ಥಾಪಕ ಪ್ರಸಾದ್, ವಲಯ ಸಿಬ್ಬಂದಿಗಳಾದ ರಾಜೇಶ್, ನಾಗೇಶ, ಮಹೇಂದ್ರ, ರಾಜು ಇತರರು ಇದ್ದಾರೆ.