ಚಾಮರಾಜನಗರ: ಪಶುವೈದ್ಯಕೀಯ ಪರೀಕ್ಷಕರು ಸಂವಿಧಾನ ಬದ್ಧ ಹಕ್ಕುಗಳನ್ನು ಪಡೆಯಲು ಸಂಘಟನೆ ಅವಶ್ಯಕವಾಗಿದೆ ಎಂದು ಬೆಂಗಳೂರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಪರ ನಿರ್ದೇಶಕ ಡಾ.ಪ್ರಸಾದ್‌ಮೂರ್ತಿ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯ ಪಶುವೈದ್ಯಕೀಯ ಪರೀಕ್ಷಕರ ಸಂಘ ಜಿಲ್ಲಾ ಶಾಖೆ ಉದ್ಘಾಟನೆ, ಪಶುಸೇವಕ ಪ್ರಶಸ್ತಿ ಪ್ರದಾನ, ಸರ್ವ ಸದಸ್ಯರ ವಾರ್ಷಿಕ ಮಹಾಸಭೆಮತ್ತು ತಾಂತ್ರಿಕ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಶಿಕ್ಷಣ, ಸಂಘಟನೆ, ಹೋರಾಟ ಆಶಯದಂತೆ ನಮಗಿರುವ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡಬೇಕಾಗುತ್ತದೆ ಅದಕ್ಕಾಗಿ ಒಂದು ಸಂಘಟನೆ ಅವಶ್ಯಕವಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪಶುಪಾಲನಾ ಮತ್ತು ಪಶು ಇಲಾಖೆ ಉಪ ನಿರ್ದೇಶಕ ಡಾ.ಹನುಮೇಗೌಡ, ಸಂಘದ ಜಿಲ್ಲಾಧ್ಯಕ್ಷ ಎಚ್.ಎಸ್.ಶಿವಮೂರ್ತಿ, ಮೈಸೂರು ಜಂಟಿ ನಿರ್ದೆಶಕ ಡಾ.ಶಿವಣ್ಣ, ರಾಜ್ಯಾಧ್ಯಕ್ಷ ಡಾ.ಪಾಂಡುರಂಗ ಹೊಸಮನಿ, ಡಾ.ಜನಾರ್ಧನ್, ಡಾ.ನಟರಾಜು, ಡಾ. ಮೋಹನ್, ಡಾ.ಸಿದ್ದರಾಜು, ಡಾ.ಶಿವಕುಮಾರ್, ಡಾ.ನಾಗೇಂದ್ರಸ್ವಾಮಿ, ಡಾ.ಶಿವರಾಜು ಇತರರು ಹಾಜರಿದ್ದರು.