ಚಾಮರಾಜನಗರ: ನಗರಸಭಾ ವ್ಯಾಪ್ತಿಯಲ್ಲಿರುವ ಸಾರ್ವಜನಿಕರಿಗೆ, ಉದ್ದಿಮೆದಾರರಿಗೆ ಆ.27ರಂದು ಸೋಮವಾರ ಮಧ್ಯಾಹ್ನ 3 ಗಂಟೆಯಿಂದ ಉದ್ದಿಮೆ ಪರವಾನಗಿ ನವೀಕರಣ ಮಾಡಿಸುತ್ತೇವೆ ಮತ್ತು ಉದ್ದಿಮೆ ಪರವಾನಗಿ ಕೊಡಿಸುತ್ತೇವೆ ಎಂದು ನಕಲಿ ಕರೆಗಳು ಬರುತ್ತಿದ್ದು, ಈ ನಕಲಿ ಪೋನ್ ಕರೆಗೆ ಸ್ಪಂದಿಸದಿರಲು ನಗರಸಭೆ ಮನವಿ ಮಾಡಿದೆ.
ನಗರಸಭೆ ಕಚೇರಿಯಿಂದ ಯಾವುದೇ ರೀತಿಯ ಕರೆ, ಮೆಸೇಜ್ ಅಥವಾ ಕ್ಯೂಆರ್ ಕೋಡ್ ಮತ್ತು ಮಾಹಿತಿಯನ್ನು ಕಳುಹಿಸಿರುವುದಿಲ್ಲ. ಇದು ಫೇಕ್ ಕಾಲ್(ನಕಲಿ ಕರೆ) ಆಗಿರುತ್ತದೆ. ಹೀಗಾಗಿ ಯಾರು ಕೂಡ ಮೊಬೈಲ್ ಸಂಖ್ಯೆ 6362540190, 8073071685 ಇಂದ ಬರುವ ಕರೆ, ಮೆಸೇಜ್ಗೆ ಸ್ವಂದಿಸದೇ ಎಚ್ಚರವಹಿಸಲು ಕೋರಿದೆ. ಈ ರೀತಿ ಕರೆ ಬಂದಲ್ಲಿ ನಗರಸಭಾ ಕಚೇರಿಗೆ ಅಥವಾ ಪೊಲೀಸ್ ಠಾಣೆ ಇಲಾಖೆಗೆ ದೂರು ನೀಡಬಹುದಾಗಿದೆ.
ನಕಲಿ ಕರೆಗೆ ಯಾರಾದರೂ ಸ್ಪಂದಿಸಿ ಹಣ ನಷ್ಟ ಮಾಡಿಕೊಂಡಲ್ಲಿ ನಗರಸಭೆಯು ಜವಾಬ್ದಾರರಲ್ಲಾ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.