ಚಾಮರಾಜನಗರ: ರೋಟರಿ ಸಂಸ್ಥೆ ಎಂದರೆ ಮಾನವೀಯತೆ ಸೇವೆಯಾಗಿದೆ. ಈ ಸೇವೆಯನ್ನು ಸರ್ವರಿಗೂ ತಲುಪಿಸುವ ಕೆಲಸವನ್ನು ನಾವೆಲ್ಲರೂ ಒಂದಾಗಿ ಮಾಡೋಣ ಎಂದು ಜಿಲ್ಲಾ ಯೋಜನೆಗಳ ಛೇರ್ಮನ್ ಸೋಮಶೇಖರ್ ಹೇಳಿದರು.
ನಗರದ ರೋಟರಿ ಭವನದಲ್ಲಿ ಬುಧವಾರ ಆಯೋಜಿಸಿದ್ದ ರೋಟರಿ ಸಂಸ್ಥೆ, ರೋಟರಿ ಸಿಲ್ಕ್ ಸಿಟಿ ಜಂಟಿ ವಿಶೇಷ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಈ ವರ್ಷ ರೋಟರಿಯು 10 ಯೋಜನೆ ಗಳನ್ನು ತಂದಿದೆ. ಸಂಧ್ಯಾ ಸುರಕ್ಷಾ ಯೋಜನೆ, ಪಾಟಿಸಿಟ್ ಹೆಲ್ತ್, ದುಶ್ಚಟ ಬಿಡಿಸುವುದು, ಗರ್ಭ ಕೋಶ ಕ್ಯಾನ್ಸರ್, ಕುಡಿಯುವ ನೀರು ನಿರ್ವಹಣೆ ಬಗ್ಗೆ ಅರಿವು ಮೂಡಿಸುವುದು. ಅಂಗನವಾಡಿ ಪುನಶ್ಚೇತನ ಗೊಳಿಸುವುದು. ಹೃದಯಕ್ಕೆ ಸಂಬಂಧಿಸಿದ ಕಾಯಿಲೆ, ರಸ್ತೆ ಸುರಕ್ಷತೆ, ಮಾನಸಿಕ ಕಾಯಿಲೆ ಕುರಿತು ಅರಿವು ಮೂಡಿಸುವುದು. ಜೀವನ ಕೌಶಲ್ಯ ತರಬೇತಿ ಕೊಡಿಸುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು ಎಂದರು.
ಸಭೆಯಲ್ಲಿ ರೋಟರಿ ಅಧ್ಯಕ್ಷ ರಾಮಸಮುದ್ರ ಎಲ್.ನಾಗರಾಜು, ಕಾರ್ಯದರ್ಶಿ ಎಚ್.ಎಂ.ಗುರುಸ್ವಾಮಿ, ರೋಟರಿ ಸಂಸ್ಥಾಪಕ ಸದಸ್ಯ ಶ್ರೀನಿವಾಸಶೆಟ್ಟಿ, ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಮಾಣಿಕ್ ಚಂದ್ ಸಿರ್ವಿ, ಕಾರ್ಯದರ್ಶಿ ಶಮಿತ್ ಕುಮಾರ್, ಎಲ್.ಸುರೇಶ್ ಹಾಗೂ ಸದಸ್ಯರು ಹಾಜರಿದ್ದರು.