ಜಿಲ್ಲೆ

ಗೋಮುಖೇಶ್ವರ ದೇವಾಲಯದಲ್ಲಿ ಅನ್ನಸಂತರ್ಪಣೆ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಭೀಮನ ಅಮಾವಾಸ್ಯೆ ಅಂಗವಾಗಿ ಶ್ರೀಗೋಮುಖೇಶ್ವರ ದೇವಸ್ಥಾನದಲ್ಲಿ ಸೋಮವಾರ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿತು.

ತಾಲೂಕಿನ ಹರದನಹಳ್ಳಿ-ಬಂಡಿಗೆರೆ ಗ್ರಾಮದಲ್ಲಿರುವ ಶ್ರೀ ಗೋಮುಖೇಶ್ವರ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ವಿವಿಧ ಪೂಜೆ ನಡೆದು, ಕಳಶ ಪ್ರತಿಷ್ಠಾಪನೆ ಮಾಡಿ, ಹೋಮ-ಹವನ ನಡೆಸಿ ನಾಡಿನ ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ದೇವಾಲಯದಲ್ಲಿ ಮೂರು ಕೊಳಗಳಿದ್ದು, ಲಿಂಗ ಪ್ರತಿಷ್ಠಾಪನೆ ಮಾಡಿದ ದಿನಗಳಿಂದ ಪ್ರತಿ ಅಮಾವಾಸ್ಯೆ ದಿನವೂ ದೇವಾಲಯದಲ್ಲಿ ಅನ್ನಸಂತಾರ್ಪಣೆ ಹಮ್ಮಿಕೊಂಡು ಬರಲಾಗುತ್ತಿದೆ.

ಭೀಮನ ಅಮಾವಾಸ್ಯೆಯ ಅಂಗವಾಗಿ ಬೆಳಿಗ್ಗೆಯಿಂದಲೇ ಅನ್ನಸಂತಾರ್ಪಣೆ ಪ್ರಾರಂಭವಾಗಿ ಸಂಜೆಯವರೆಗೂ ನಡೆಯಿತು. ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಹೆಚ್ಚನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ದುರ್ಗದೇವಿ ದೇವಸ್ಥಾನದ ಭಕ್ತಾಧಿಗಳು ಹಾಗೂ ಹರದನಹಳ್ಳಿ, ಬಂಡಿಗೆರೆ ಗ್ರಾಮಸ್ಥಾರು ಹಾಜರಿದ್ದರು.