ಚಾಮರಾಜನಗರ: ಅನ್ನಭಾಗ್ಯದ ಅಕ್ಕಿಯನ್ನು ಬಡವರ ಬಳಿ ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಕೊಂಡುಹೋಗುತ್ತಿದ್ದ ಆರೋಪಿಯನ್ನು ಸಂತೇಮರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಿ.ನರಸೀಪುರ ತಾಲೂಕಿನ ದೊಡ್ಡೇಬಾಗಿಲು ಗ್ರಾಮದ ವೀರಭದ್ರಸ್ವಾಮಿ(34) ಬಂಧಿತ ಆರೋಪಿ. ಈತ ತಾಲೂಕಿನ ಕಾವುದವಾಡಿ ಬಳಿ ಮೊಪೆಡ್‌ನಲ್ಲಿ ಬರುತ್ತಿದ್ದಾಗ ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಮೊಪೆಡ್‌ನಲ್ಲಿದ್ದ ಮೂಟೆಯನ್ನು ಪರಿಶೀಲಿಸಿದಾಗ ಅನ್ನಭಾಗ್ಯದ ಅಕ್ಕಿ ಪತ್ತೆಯಾಗಿದೆ. ಆರೋಪಿಯನ್ನು ಬಂಧಿಸಿ, ಮೊಪೆಡ್ ಮತ್ತು ಮೂರು ಪ್ಲಾಸ್ಟಿಕ್ ಚೀಲಗಳಲ್ಲಿದ್ದ 243 ಕೆ.ಜಿ.ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.