ಜಿಲ್ಲೆ

ಪತ್ರಿಕಾವಿತರಕ ಉಮ್ಮತ್ತೂರು ನಿಂಗಪ್ಪ ಸೇವೆ ಸ್ಮರಣೆ

ಎ.ಎಸ್.ಮಣಿಕಂಠ

ಚಾಮರಾಜನಗರ: ಜಿಲ್ಲಾ ಪತ್ರಿಕಾ ವಿತರಕರ ಸಂಘದ ಸದಸ್ಯರು ಹಾಗೂ ಪತ್ರಿಕಾವಿತರಕರಾದ ಉಮ್ಮತ್ತೂರು ಗ್ರಾಮದ ನಿಂಗಪ್ಪ ಶುಕ್ರವಾರ ಹೃದಯಾಘಾತ ದಿಂದ ನಿಧನರಾದ ಹಿನ್ನೆಲೆಯಲ್ಲಿ ಶನಿವಾರ ನಗರದ ಜಿಲ್ಲಾ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಿಂಗಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಸಿ. ಪುರುಷೋತ್ತಮ್ ಮಾತನಾಡಿ, ಸಂಘದ ಸದಸ್ಯರು, ಪತ್ರಿಕಾವಿತರಕರಾಗಿದ್ದ ನಿಂಗಪ್ಪ ಅವರ ನಿಧನ ಪತ್ರಿಕಾವಿತರಕರ ಸಂಘಕ್ಕೆ ಭರಿಸಲಾಗದ ನಷ್ಟ. ಪ್ರತಿದಿನ ಮುಂಜಾನೆ ವೇಳೆ ಮನೆಮನೆಗೂ ಪತ್ರಿಕೆ ತಲುಪಿಸುವ ಕಾರ್ಯ ಮಾಡುವ ವಿತರಕರ ಸೇವೆ ಅನನ್ಯ. ನಿಂಗಪ್ಪ ಅವರ ನಿಧನದ ದುಖ ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದರು. ಇದೇವೇಳೆ ಮೃತರ ಗೌರವಾರ್ಥ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.

ಈ ವೇಳೆ ಸಂಘದ ಸಹಕಾರ್ಯದರ್ಶಿ ಎಲ್.ಶಿವಲಿಂಗಮೂರ್ತಿ, ಪತ್ರಿಕಾ ಕಾರ್ಯದರ್ಶಿ ಹರವೆಮಹೇಶ್, ನಿರ್ದೇಶಕರಾದ ಆರ್.ಎನ್.ಸಿದ್ದಲಿಂಗಸ್ವಾಮಿ, ಎಂ.ಲಿಂಗಪ್ಪ, ಎಂ.ರೇಣುಕೇಶ್, ಬದನಗುಪ್ಪೆಮಲ್ಲಣ್ಣ, ಓಶಾಂತಿಆರಾಧ್ಯ, ಸದಸ್ಯರಾದ ಮರಿಯಾಲಸಿದ್ದಪ್ಪ, ವಿಘ್ಞೇಶ್, ಜ್ಯೋತಿಗೌಡನಪುರ ಸಿದ್ದರಾಜು, ಬಸವರಾಜು ಹಾಜರಿದ್ದರು.