ಜಿಲ್ಲೆ

23ರಂದು ಮಹಾ ಅಧಿವೇಶನ

reportermys

ಚಾಮರಾಜನಗರ: ಕಾಯಕ ಸಮಾಜಗಳ ಮೀಸಲಾತಿ ಪ್ರಮಾಣವನ್ನು ಶೇ.27ಕ್ಕೆ ಹೆಚ್ಚಿಸಬೇಕು ಮತ್ತು ಒಳಮೀಸಲಾತಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಜ.23ರಂದು ಮೈಸೂರಿನಲ್ಲಿ ರಾಜ್ಯ ಪ್ರತಿನಿಧಿಗಳ ಪರಿಷತ್ತಿನ ಮಹಾ
ಮೈಸೂರಿನ ಇನ್ಸ್ಟಿಟ್ಯೂಷನ್ ಆ್ ಇಂಜಿನಿಯರಿಂಗ್ ಸಭಾಂಗಣದಲ್ಲಿ ಅಂದು ಬೆಳಗ್ಗೆ 10.30ಕ್ಕೆ ಶುರುವಾಗಲಿರುವ ಅಧಿವೇಶದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕಾಯಕ ಸಮಾಜಗಳ ಅಭಿವೃದ್ಧಿ ಪ್ರಾಧಿಕಾರ, ಶೇ.27ರಷ್ಟು ಮೀಸಲಾತಿ, ಒಳ ಮೀಸಲಾತಿ ನೀಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ೆಬ್ರವರಿಯಲ್ಲಿ ಮಂಡಿಸಲಿರುವ ಬಜೆಟ್‌ನಲ್ಲಿ ೋಷಣೆ ಮಾಡಬೇಕೆಂದು ಒತ್ತಾಯಿಸುತ್ತೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.


ತಳ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಲು ಮೀಸಲಾತಿ ಅತ್ಯಗತ್ಯ. ವೀರಶೈವ -ಲಿಂಗಾಯತರು, ಒಕ್ಕಲಿಗರು, ಬ್ರಾಹ್ಮಣರು ಈ ಹಿಂದೆ ನಮಗೆ ಮೀಸಲಾತಿ ಬೇಡ ಎಂದು ವಾದ ಮಾಡಿದ್ದರು. ಪಂಚಮಶಾಲಿಗಳು ನಮ್ಮನ್ನು 2ಎಗೆ ಸೇರಿಸಿ ಎಂದು ಕೇಳುತ್ತಿದ್ದಾರೆ. ಈಗ ನಮಗೂ ಮೀಸಲಾತಿ ಬೇಕು ಎಂದು ಕೇಳುತ್ತಿದ್ದಾರೆ. ಇದು ಸಂವಿಧಾನ ವಿರೋಧಿ ಧೋರಣೆ ಎಂದರು. ಮಠಗಳು ಸರ್ವಜನಾಂಗದ ಮಠಗಳಾಗಬೇಕು. ಸ್ವಾಮೀಜಿಗಳು ಒಂದೊಂದು ಜಾತಿಗೆ ಮೀಸಲಾತಿ ಕೇಳಿ ಕಾವಿಗೆ ಅವಮಾನ ಮಾಡುತ್ತಿದ್ದಾರೆ. ರಾಜ್ಯದ ಮಠಾಧೀಶರು ಎಲ್ಲ ಸಮಾಜಗಳ ಧ್ವನಿಯಾಗಬೇಕು. ತಳ ಸಮುದಾಯಗಳನ್ನು ಮುನ್ನೆಲೆಗೆ ತರಬೇಕು ಎಂದರು.

ಸಂವಿಧಾನದ ಅಡಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಶಾಸಕರು ಒಂದು ಜಾತಿಗೆ ಸೀಮಿತರಾಗುತ್ತಿದ್ದಾರೆ. ರಾಜ್ಯ ಸರ್ಕಾರ ಒಕ್ಕಲಿಗರು ಮತ್ತು ಲಿಂಗಾಯತರಿಗೆ 2ಸಿ ಮತ್ತು 2 ಡಿ ಪ್ರವರ್ಗಗಳಲ್ಲಿ ಮೀಸಲಾತಿ ನೀಡಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಖಂಡಿಸುತ್ತೇವೆ. ಮೇಲ್ವರ್ಗಕ್ಕೆ ಮೀಸಲಾತಿ ನೀಡುವುದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು. ಗೋಷ್ಠಿಯಲ್ಲಿ ಒಕ್ಕೂಟದ ಸಂಘಟಕ ನಂಜುಂಡಸ್ವಾಮಿ, ಸಂಚಾಲಕ ಜಯರಾಂ, ಮುಖ್ಯ ಸಲಹೆಗಾರ ಸಂಪತ್, ಗಾಣಿಗ ಸಮಾಜದ ಮುಖಂಡ ಅಂಕಶೆಟ್ಟಿ, ವಿಶ್ವಕರ್ಮ ಜನಾಂಗದ ಶ್ರಿನಿವಾಸಪ್ರಸಾದ್, ಸವಿತಾ ಸಮಾಜದ ಜಯರಾಂ ಇದ್ದರು.