ಜಿಲ್ಲೆ

ಇನ್ನೆಷ್ಟು ತೊಡಕುಗಳನ್ನು ಮೀರಬೇಕು ಕಾನೂನು ಕಾಲೇಜು

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಕನೂನು ಕಾಲೇಜು ಪ್ರಾರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಸ್ಥಾನಿಕ ವಿಚಾರಣಾ ಸಮಿತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಗರದ ಸಂತೇಮರಹಳ್ಳಿ ರಸ್ತೆಯಲ್ಲಿರುವ ಹಳೆ ರೇಷ್ಮೆ ಮಾರುಕಟ್ಟೆ ಕಟ್ಟಡದಲ್ಲಿ ಪ್ರಾರಂಭಸಲು ಸಿದ್ದತೆ ನಡೆಸಿರುವ ಕನೂನು ಕಾಲೇಜಿಗೆ ಮೂರು ಜನರನ್ನು ಒಳಗೊಂಡ ಸ್ಥಾನಕ ವಿಚಾರಣಾ ಸಮಿತಿ ಭೇಟಿ ನೀಡಿ ಕಾನೂನು ಕಾಲೇಜು ಪ್ರಾರಂಭಿಸುವ ಸಂಬಂಧ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಸ್ಥಾನಿಕ ವಿಚಾರಣಾ ಸಮಿತಿ ಸದಸ್ಯ, ಉಡುಪಿಯ ವೈಕುಂಠ ಬಾಳಿಗ ಕಾನೂನು ಕಾಲೇಜು ಪ್ರಾಂಶುಪಾಲ ಕೆ.ಎಸ್.ರಘುನಾಥ್ ಮಾತನಾಡಿ, ಈ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕಾನೂನು ಕಾಲೇಜು ಪ್ರಾರಂಭವಾಗುವುದು ಬಾರ್ ಕೌನ್ಸಿಲ್ ಆ್ ಇಂಡಿಯಾ ನಿರ್ಧಾರದಲ್ಲಿದೆ. ತಾತ್ಕಲಿಕವಾಗಿ ಹಳೆ ರೇಷ್ಮೆ ಕಟ್ಟಡದಲ್ಲಿ ಕಾಲೇಜು ಪ್ರಾರಂಭ ಮಾಡಲು ಯಾವುದೇ ಸಮಸ್ಯೆ ಇಲ್ಲ. ಬಾರ್ ಕೌನ್ಸಿಲ್ ಆ್ ಇಂಡಿಯಾ ತಂಡ ಕಾಲೇಜು ಪರಿಶೀಲನೆಗೆ ಭೇಟಿ ನೀಡಿ ಅನುಮತಿ ಕೊಟ್ಟರೆ 5 ವರ್ಷದ ಕೋರ್ಸ್‌ಗೆ ದಾಖಲಾತಿ ಮಾಡಲು ಅವಕಾಶವಿದೆ. 3 ವರ್ಷದ ಕೋರ್ಸ್ ಪ್ರಾರಂಭಮಾಡಲು ಯೂನಿವರ್ಸಿಟಿ ನೋಟಿಫಿಕೇಶನ್ ಆಗಿಲ್ಲ ಆದರೂ ಇದಕ್ಕೆ ಸಾಕಷ್ಟು ಸಮಯವಿದೆ ಎಂದರು.

2023-24 ನೇ ಸಾಲಿನಲ್ಲೇ ಕಾಲೇಜು ಪ್ರಾರಂಭವಾಗಬೇಕು, ಕೋವಿಡ್ ನಂತರ ಕಾನೂನು ವಿಶ್ವ ವಿದ್ಯಾಲಯದ ವೇಳಾಪಟ್ಟಿಯಲ್ಲಿ ಬದಲಾವಣೆ ಆಗಿದ್ದು ನವೆಂಬರ್ ತಿಂಗಳಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತದೆ. ಅಷ್ಟರಲ್ಲಿ ಜಿಲ್ಲೆಯಲ್ಲಿ ಕಾಲೇಜು ಪ್ರಾರಂಭವಾಗುತ್ತದೆ ಎಂದು ಭಾವಿಸಿದ್ದೇನೆ.
ಈಗಿರುವ ಕಟ್ಟಡವನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅನುಸಾರ ಮತ್ತಷ್ಟು ಉನ್ನತೀಕರಿಸಬೇಕಿದೆ. ಸ್ಥಳೀಯ ಶಾಸಕರು ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುತ್ತೇವೆ ಎಂದು ಹೇಳಿದ್ದಾರೆ. ಹೊಸ ಕಟ್ಟಡ ನಿರ್ಮಾಣಕ್ಕೆ ತಯಾರಿ ಕೈಗೊಳ್ಳಬೇಕು. ಬಿಸಿಐ ಬರುವವರೆಗೆ ಎಲ್ಲವೂ ಲಭ್ಯವಿದ್ದರೆ ಅನುಮತಿ ದೊರೆಯುತ್ತದೆ ಎಂದು ಭರವಸೆ ನೀಡಿದರು.

ಕಾನೂನು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ.ಗೋಪಾಲ ಮಾತನಾಡಿ, ನಗರದ ಹೊರ ವಲಯದಲ್ಲಿರುವ ಯಡಪುರದ ಬಳಿ ಸರ್ವೇ ನಂ.112 ರಲ್ಲಿ ಕಾನೂನು ಕಾಲೇಜು ಕಟ್ಟಡ ನಿರ್ಮಾಣಕ್ಕೆ 4 ಎಕರೆ ಜಾಗವನ್ನು ನಿಗದಿಗೊಳಿಸಲಾಗಿದೆ. ಹಿಂದಿನ ವಾರ ಸರ್ಕಾರದಿಂದ ಜಾಗ ಹಸ್ತಾಂತರವಾಗಿದೆ. ಹಳೆಯ ರೇಷ್ಮೆ ಮಾರುಕಟ್ಟೆ ಕಟ್ಟಡದಲ್ಲಿ ಈ ಸಾಲಿನಿಂದಲೇ ಕಾನೂನು ಕಾಲೇಜು ಪ್ರಾರಂಭವಾಗುವ ವಿಶ್ವಾಸವಿದೆ ಎಂದು ತಿಳಿಸಿದರು.

ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಸಚಿವ ಡಾ.ಸುನೀಲ್ ಬಾಗಡೆ
ಮಂಡ್ಯ ಪಿಎಸ್ ಕಾನೂನು ಕಾಲೇಜು ಸಹಾಯಕ ಪ್ರಾಧ್ಯಾಪಕ ಜಯಕುಮಾರ್ ಹಾಜರಿದ್ದರು.

ಕಾನೂನು ಕಾಲೇಜು ಹೊಸ ಕಟ್ಟಡವನ್ನು 1 ವರ್ಷದಲ್ಲಿ ನಿರ್ಮಾಣ ಮಾಡಿಕೊಡುತ್ತೇವೆ. ಈಗ ಇರುವ ಹಳೆಯ ಕಟ್ಟಡಕ್ಕೂ ಅಗತ್ಯ ಮೂಲ ಸೌಕರ್ಯವನ್ನು ಕಲ್ಪಿಸುತ್ತೇವೆ. ಒಟ್ಟಾರೆ ಜಿಲ್ಲಾ ಕೇಂದ್ರದಲ್ಲಿ ಈ ವರ್ಷದಲ್ಲಿ ಕಾನೂನು ಕಾಲೇಜು ಪ್ರಾರಂಭವಾಗಬೇಕು.-ಸಿ.ಪುಟ್ಟರಂಗಶೆಟ್ಟಿ, ಶಾಸಕ, ಚಾಮರಾಜನಗರ