ಜಿಲ್ಲೆ

ಪ್ರಧಾನಮಂತ್ರಿ ಮತ್ಸ್ಯ ಯೋಜನೆಯಡಿ ಅರ್ಜಿ ಆಹ್ವಾನ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಮೀನುಗಾರಿಕೆ ಇಲಾಖೆ ವತಿಯಿಂದ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

2020-21, 2021-22, 2022-23 ಹಾಗೂ 2023-24ನೇ ಸಾಲಿನಲ್ಲಿ ಹೆಚ್ಚುವರಿ ಘಟಕಗಳಿಗೆ ಸಂಬಂಧಿಸಿದಂತೆ ಸಿಹಿನೀರಿನ ಬಯೋಫ್ಲಾಕ್ ಕೊಳ ನಿರ್ಮಾಣ, ಹೊಸ ಮೀನುಕೃಷಿ ಕೊಳ ನಿರ್ಮಾಣ, ಶೈತ್ಯಾಗಾರ, ಮಂಜುಗಡ್ಡೆ ಸ್ಥಾವರಗಳ ನಿರ್ಮಾಣ, ದೊಡ್ಡ, ಮಧ್ಯಮ ಹಾಗೂ ಸಣ್ಣ ಪ್ರಮಾಣದ ಆರ್.ಎ.ಎಸ್. ಘಟಕ ಸ್ಥಾಪನೆ ಮತ್ತು ದ್ವಿಚಕ್ರ ವಾಹನ ಅಥವಾ ಸೈಕಲ್ ಖರೀದಿಗೆ ಹಾಗೂ ಶೈತ್ಯೀಕರಿಸಿದ ವಾಹನಗಳ ಖರೀದಿಗೆ ಸಹಾಯಧನ ನೀಡಲಾಗುತ್ತದೆ. ಆಸಕ್ತ ಒಳನಾಡು ಮೀನುಗಾರರು ಸಹಾಯಧನ ಪಡೆಯಲು ಸೂಕ್ತ ದಾಖಲೆಗಳೊಂದಿಗೆ ಸಂಬಂಧಪಟ್ಟ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಆ.2 ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಮೀನುಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.