ಜಿಲ್ಲೆ

ಎಸ್‌ಪಿಬಿ ಅಭಿಮಾನಿಗಳಿಂದ ಪರಿಸರ ಸೇವೆ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಆರೋಗ್ಯವಂತರಿಗೆ ಶುದ್ಧ ಗಾಳಿ ಮುಖ್ಯ. ಇದಕ್ಕಾಗಿಯೇ ಉಸಿರೇ ಹಸಿರು ಎನ್ನುತ್ತಾರೆ ಎಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಬಂಗಾರು ಹೇಳಿದರು.

ನಗರದ ಜೋಡಿ ರಸ್ತೆಯಲ್ಲಿ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಕಲಾವೇದಿಕೆ ವತಿಯಿಂದ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಜನ್ಮದಿನದ ಅಂಗವಾಗಿ ಶನಿವಾರ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಗೀತದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಎಸ್‌ಪಿಬಿ ಅಭಿಮಾನಿಗಳು ಅವರ ಜನ್ಮದಿನದ ಅಂಗವಾಗಿ ನಗರದಲ್ಲಿ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮೂರು ದಿನಗಳಿಂದ ಬಟ್ಟೆ, ಹಣ್ಣು ಹಂಪಲು ವಿತರಣೆ ಮಾಡಿದ್ದಾರೆ. ಇದರ ಜತೆಗೆ ಗಿಡ ನೆಡುವ ಕಾರ್ಯವನ್ನೂ ಮಾಡಿ ಪರಿಸರ ಕಾಳಜಿ ಮೆರೆದಿದ್ದಾರೆ.

ಕಲಾ ವೇದಿಕೆಯ ಅಧ್ಯಕ್ಷ ಶಿವು, ಉದ್ಯಮಿ ರವಿ ಮಂಚೇಗೌಡ, ಸಮಾಜ ಸೇವಕ ಡಾ.ಪರಮೇಶ್ವರಪ್ಪ, ರೋಟರಿ ಮಾಜಿ ಅಧ್ಯಕ್ಷ ಕೆಂಪನಪುರ ಮಾದೇವಸ್ವಾಮಿ, ಜನಪದ ಗಾಯಕ ಹರದನಹಳ್ಳಿ ಸುರೇಶ್‌ನಾಗ್, ಕವಿ ಬಳೆಪೇಟೆ ಪ್ರಕಾಶ್, ಕಲಾ ವೇದಿಕೆಯ ಸದಸ್ಯರಾದ ರಾಜಣ್ಣ, ಮಹದೇವಸ್ವಾಮಿ, ಪ್ರಕಾಶ್, ಮುತ್ತುರಾಜ್ ಮತ್ತು ಇತರರು ಇದ್ದರು.