ಕೊಳ್ಳೇಗಾಲ: ತಾಲೂಕಿನ ಕಾಮಗೆರೆ ಗ್ರಾಮದ ಬಳಿ ಬೊಲೆರೋ ವಾಹನ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಸವಾರನಿಗೆ ಕಾಲು ಮುರಿದಿದೆ.
ಕಾಮಗೆರೆ ಗ್ರಾಮದ ಶಂಕರಪ್ಪ ಎಂಬುವರ ಮಗ ಬಸವಣ್ಣ (36) ಮೃತಪಟ್ಟವರು. ಅದೇ ಗ್ರಾಮದ ತ್ರಿನೇತ್ರ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಿಬ್ಬರು ಬೈಕ್‌ನಲ್ಲಿ ಸೋಮವಾರ ಕಾರ್ಯನಿಮಿತ್ತ ಹನೂರಿಗೆ ತೆರಳಿ ಕೆಲಸ ಮುಗಿದ ಬಳಿಕ ಗ್ರಾಮಕ್ಕೆ ಹಿಂದಿರುಗುವಾಗ ಕಾಮಗೆರೆ ಗ್ರಾಮದ ಬಳಿ ಎದುರುಗಡೆಯಿಂದ ಬಂದ ಬೊಲೆರೋ ವಾಹನ ಡಿಕ್ಕಿ ಹೊಡೆದಿದೆ. ಬಸವಣ್ಣ ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡಿದ್ದ ತ್ರೀನೇತ್ರ ಅವರನ್ನು ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎರಡೂ ವಾಹನಗಳನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.