ಜಿಲ್ಲೆ

ಸೋಲಾರ್ ಬೇಲಿ ಕಿತ್ತುಹಾಕುವ ಆನೆಗಳು

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಕಾಡಾನೆಗಳ ಹಾವಳಿಯಿಂದ ಬಂಡೀಪುರದ ಸುತ್ತಮುತ್ತಲಿನ ಯಾವುದೇ ಜಮೀನುಗಳಲ್ಲಿ ರೈತರು ಬೆಳೆಬೆಳೆಯಲು ಆಗುತ್ತಿಲ್ಲ ಎಂದು ಗುಂಡ್ಲುಪೇಟೆ ತಾಲೂಕಿನ ಮಂಗಲ ಗ್ರಾಮದ ಈಶಕುಮಾರ್ ಹೇಳಿದ್ದಾರೆ.

ಕಾಡಾನೆ ಹಾವಳಿ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ಕಾಡಂಚಿನ ಗ್ರಾಮಗಳಲ್ಲಿ ನಿರಂತರವಾಗಿ ಆನೆಗಳ ಹಾವಳಿಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗುತ್ತಿದೆ. ಸಾಲ ಮಾಡಿ ಸೋಲಾರ್ ಬೇಲಿಗಳನ್ನು ಅಳವಡಿಸಿದರೂ ಕಿತ್ತುಹಾಕುತ್ತಿವೆ. ಇದರಿಂದಾಗಿ ಬಹುತೇಕ ರೈತರು ಕೇರಳದ ಜನರಿಗೆ ಶುಂಠಿ ಬೆಳೆಯಲು ಗುತ್ತಿಗೆಗೆ ಕೊಟ್ಟು ತಾವು ರೆಸಾರ್ಟ್ ಹಾಗೂ ನೆರೆ ರಾಜ್ಯಗಳಿಗೆ ಉದ್ಯೋಗ ಹುಡುಕಿಕೊಂಡು ಹೊಗುತ್ತಿದ್ದಾರೆ ಎಂದಿದ್ದಾರೆ.