ಜಿಲ್ಲೆ

ಬೆಳೆ ಸಮೀಕ್ಷೆ ದಾಖಲಿಸಲು ಸಲಹೆ

ಚಾಮರಾಜನಗರ: ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಮುಂಗಾರು ಹಂಗಾಮಿನ ಬೆಳೆ ವಿವರಗಳನ್ನು (2023-24ನೇ ಸಾಲು) ತಾವೇ ಸ್ವತಃ ಮೊಬೈಲ್ ತಂತ್ರಾಂಶದ ಮೂಲಕ ದಾಖಲಿಸಬಹುದಾಗಿದೆ.

ವಿವರಗಳನ್ನು ದಾಖಲಿಸಲು ಜು.31ರವರೆಗೆ ಅವಕಾಶ ನೀಡಲಾಗಿದೆ. ಬೆಳೆ ಸಮೀಕ್ಷೆ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಬೆಳೆ ವಿವರ ದಾಖಲಿಸಬಹುದಾಗಿದೆ. ಇದರ ಜತೆಗೆ ಪ್ರತಿ ಗ್ರಾಮಕ್ಕೆ ಬೆಳೆ ಸಮೀಕ್ಷೆ ಮಾಡಲು ಖಾಸಗಿ ನಿವಾಸಿಗಳನ್ನು (ಪಿಆರ್) ನಿಯೋಜಿಸಲಾಗಿರುತ್ತದೆ. ಖಾಸಗಿ ನಿವಾಸಿಗಳು ತಾಕಿಗೆ ಭೇಟಿ ನೀಡಿದಾಗ ಬೆಳೆಗಳ ವಿವರಗಳನ್ನು ನಿಖರವಾಗಿ ದಾಖಲಿಸಲು ರೈತರು ಸಹಕರಿಸಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ, ಕಂದಾಯ ಇಲಾಖೆ, ರೇಷ್ಮೆ ಇಲಾಖೆ, ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬೇಕಾಗಿ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.