ಜಿಲ್ಲೆ

ನಾಡುಕಟ್ಟುವಲ್ಲಿ ಕೆಂಪೇಗೌಡರ ಪಾತ್ರ ಅಪಾರ

ಚಾಮರಾಜನಗರ: ದೇವಾಲಯಗಳು, ಕೆರೆ ,ಕಾಲುವೆ , ಉದ್ಯಾನ, ವ್ಯಾಪಾರ ,ವಾಣಿಜ್ಯ, ಸಂಸ್ಕೃತಿ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ಕೆಂಪೇಗೌಡರು ಸರ್ವ ಜನಾಂಗದ ನಾಡಪ್ರಭುಗಳಾಗಿದ್ದರು ಎಂದು ಅಖಿಲ ಕರ್ನಾಟಕ ಕನ್ನಡ ಮಹಾಸಭಾ ಅಧ್ಯಕ್ಷ ಚಾ.ರಂ.ಶ್ರೀನಿವಾಸ್ ಗೌಡ ತಿಳಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಶುಕ್ರವಾರ ತಾಲೂಕು ಕಸಾಪ ವತಿಯಿಂದ ಆಯೋಜಿಸಿದ್ದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕೆಂಪೇಗೌಡರ ದೂರದೃಷ್ಟಿ ಇಂದಿಗೂ ಅವರ ಹೆಸರು ಶಾಶ್ವತವಾಗಿ ಉಳಿದಿರಲು ಕಾರಣವಾಗಿದೆ.
ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಿರ್ಮಾಣ ಮಾಡುವ ಮೂಲಕ ಕನ್ನಡ ನಾಡು-ನುಡಿ, ಜಲ, ಭಾಷೆ, ಸಂಸ್ಕೃತಿಯ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದಾರೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಮಾತನಾಡಿ, ನಾಡಪ್ರಭುವಾಗಿ ,ಧರ್ಮ ಪ್ರಭುವಾಗಿ ಜನಸಾಮಾನ್ಯರ ಹಾಗೂ ಸಮಗ್ರ ಅಭಿವೃದ್ಧಿಯ ಪ್ರಭುವಾಗಿ ಸದಾ ಕಾಲ ಜನರ ಹೃದಯ ಸಾಮ್ರಾಜ್ಯದಲ್ಲಿ ಶಾಶ್ವತ ಪ್ರಭುವಾಗಿರುವ ಶ್ರೀ ಕೆಂಪೇಗೌಡರ ಇತಿಹಾಸ ಅಜರಾಮರವಾಗಿದೆ. ಕೆಂಪೇಗೌಡರ ದೂರ ದೃಷ್ಟಿ ಜನಸಾಮಾನ್ಯರ ಅಭಿವೃದ್ಧಿ ಹಾಗೂ ಸಮಾಜದ ಪ್ರತಿಯೊಬ್ಬರು ಸಮತ್ವ ಭಾವದಿಂದ ಅಭಿವೃದ್ಧಿ ಹೊಂದಬೇಕೆಂಬ ದೃಷ್ಟಿಕೋನವೇ ಇಂದಿನ ಆಡಳಿತಗಾರರಿಗೆ ಮಾರ್ಗದರ್ಶನವಾಗಿದೆ ಎಂದು ತಿಳಿಸಿದರು.

ಕೊಳ್ಳೇಗಾಲ ಕಸಾಪ ತಾಲೂಕು ಅಧ್ಯಕ್ಷ ಕೊಂಗರಹಳ್ಳಿ ನಾಗರಾಜು, ನಿರ್ದೇಶಕರಾದ ಪಣ್ಯದಹುಂಡಿ ರಾಜು, ಮಹೇಶ್ ಗೌಡ ,ರವಿಚಂದ್ರಪ್ರಸಾದ್, ಬಿ.ಕೆ.ಆರಾಧ್ಯ, ಶಿವಲಿಂಗ ಮೂರ್ತಿ ,ಸರಸ್ವತಿ ,ಪದ್ಮ ಪುರುಷೋತ್ತಮ್ ,ಸುರೇಶ್ ಗೌಡ, ಎಸ್.ಲಕ್ಷ್ಮೀನರಸಿಂಹ, ಬೊಮ್ಮಾಯಿ, ನಂಜುಂಡಸ್ವಾಮಿ,ಕಾರ್ ಕುಮಾರ್ ಉಪಸ್ಥಿತರಿದ್ದರು.