ಜಿಲ್ಲೆ

ಹಾಸ್ಟೆಲ್‌ಗೆ ಕುಕ್ಕರ್ ಕೊಡುಗೆ

ಚಾಮರಾಜನಗರ: ನಗರದ ಕರಿನಂಜನಪುರದಲ್ಲಿರುವ ಗುಬ್ಬಿ ತೋಟದಪ್ಪ ಮಹಿಳಾ ವಿದ್ಯಾರ್ಥಿನಿಲಯಕ್ಕೆ ಮೈಸೂರಿನ ಚಾಮರಾಜೇಶ್ವರಿ ಅಕ್ಕನ ಬಳಗದಿಂದ ಸೋಮವಾರ ಕುಕ್ಕರ್ ಕೊಡುಗೆ ನೀಡಲಾಯಿತು. ಮೈಸೂರಿನ ಮರಿಮಲ್ಲಪ್ಪ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕ ಅಧಿಕಾರಿ ಮಂಗಳಾ ಮುದ್ದಮಾದಪ್ಪ, ವಿದ್ಯಾರ್ಥಿ ನಿಲಯದ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ, ಬಳಗದ ಅಧ್ಯಕ್ಷೆ ಮಾದಲಾಂಬಿಕೆ ನಂಜುಂಡಸ್ವಾಮಿ, ಹಾಸ್ಟೆಲ್ ಪದಾಧಿಕಾರಿಗಳಾದ ಎ.ಎಂ.ಗುರುಸ್ವಾಮಿ, ಪರಮಶಿವಯ್ಯ, ಪ್ರಭುಸ್ವಾಮಿ, ಆರ್.ಪುಟ್ಟಮಲ್ಲಪ್ಪ, ಗೌಡಿಕೆ ನಾಗೇಶ್, ಅಕ್ಕನ ಬಳಗದ ಕಾರ್ಯದರ್ಶಿ ಪ್ರತಿಮಾ ಮಂಜುನಾಥ್, ಸುನೀತಾ ಗುರು ಇತರರು ಇದ್ದರು.