ಚಾಮರಾಜನಗರ: ಚರ್ಮಗಂಟು ರೋಗ, ಕರುಳು ಬೇನೆ ಇತರ ಜಾನುವಾರು ಕಾಯಿಲೆಗಳನ್ನು ತಡೆಯಲು ಲಸಿಕೆ ಹಾಕಬೇಕೆಂದು ಪಶುಸಂಗೋಪನಾ ಇಲಾಖೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಮಾತನಾಡಿದರು. ಇಲಾಖೆಯ ಉಪನಿರ್ದೇಶಕ ಹನುಮೇಗೌಡ ಅವರಿಂದ ಲಸಿಕೆ ಹಾಕುತ್ತಿರುವ ಕುರಿತು ಮಾಹಿತಿ ಪಡೆದುಕೊಂಡ ಸಚಿವರು, ಶೇ.100ರಷ್ಟು ಗುರಿ ಸಾಧಿಸಲು ಸೂಚನೆ ನೀಡಿದರು. ಕೆಲವೆಡೆ ಪಶು ಆಸ್ಪತ್ರೆ ನಿರ್ಮಾಣ ಮಾಡಲು ಜಾಗದ ಕೊರತೆ ಇರುವ ಮಾಹಿತಿ ಪಡೆದುಕೊಂಡರು. ಸರ್ಕಾರಿ ಜಾಗ ಇರುವ ಕಡೆಗಳಲ್ಲಿ ಆಸ್ಪತ್ರೆ ಕಟ್ಟುವ ಸಂಬಂಧ ಚರ್ಚೆ ನಡೆಸಿದರು.