ಜಿಲ್ಲೆ

ಜನರಿಗೆ ದೊರಕದ ಆರೋಗ್ಯ ಸೇವೆ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕೊಟ್ಟಿಕೊಂಡಿರುವ ಚಾಮರಾಜನಗರದಲ್ಲಿ ಆರೋಗ್ಯ ಸೇವೆಯೂ ಹಿಂದುಳಿದಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆಯಾದರೂ ಸೂಕ್ತ ಸಮಯಕ್ಕೆ ಹಾಗೂ ಸರಿಯಾಗಿ ಆರೋಗ್ಯ ಸೌಲಭ್ಯ ಒಂದಿಲ್ಲೊಂದು ಕಾರಣಕ್ಕೆ ಸಿಗುತ್ತಿಲ್ಲ ಎಂಬುದು ಜನರ ಆರೋಪವಾಗಿದೆ. ಆಸ್ಪತ್ರೆ ಸೇವೆ ಅತೃಪ್ತಿ, ಕುಂದುಕೊರತೆ ಹಾಗೂ ದೂರು ದುಮ್ಮಾನಗಳನ್ನು ಜನರು ಬಹಿರಂಗವಾಗಿಯೇ ಹೇಳುತ್ತಿದ್ದಾರೆ.

ಚಾಮರಾಜನಗರದ ಹೃದಯಭಾಗದಲ್ಲಿರುವ ಹಳೇ ಜಿಲ್ಲಾಸ್ಪತ್ರೆಯಲ್ಲಿ ಎಲ್ಲ ರೀತಿಯ ಆರೋಗ್ಯ ಸೌಲಭ್ಯ ಜನರಿಗೆ ಸಿಗುವಂತಾಗಬೇಕು ಎಂಬ ಒತ್ತಾಯ ಇದೀಗ ಕೇಳಿ ಬಂದಿದೆ. ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಕಾಲಕ್ಕೆ ಸೌಲಭ್ಯ, ಖಾಸಗಿ ಮೆಡಿಕಲ್ ಶಾಪ್‌ಗಳಲ್ಲಿ ಖರೀದಿ ಮಾಡಬೇಕಾದ ಔಷಧ, ಆಂಬುಲೆನ್ಸ್ ಕೊರತೆ, ಸಕಾಲಕ್ಕೆ ಸಿಗದ ಎಕ್ಸರೇ, ಪ್ರಯೋಗಾಲಯಗಳ ಸೌಲಭ್ಯ, ವೈದ್ಯರ ಕೊರತೆ, ಸ್ಥಳೀಯ ಆಸ್ಪತ್ರೆಯಲ್ಲೇ ಸಮಪರ್ಕವಾಗಿ ದೊರೆಯಬೇಕು. ಆ ಮೂಲಕ ಚಿಕಿತ್ಸೆ ಸಿಗಬೇಕೆಂಬ ಕುರಿತು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.