ಚಾಮರಾಜನಗರ: ಆದಿಕರ್ನಾಟಕ ಅಭಿವೃದ್ಧಿ ಸಂಘದ ಅನ್ಯಾಯ, ಅಕ್ರಮವನ್ನು ನ್ಯಾಯಾಲಯ ತೀರ್ಮಾನಿಸುತ್ತದೆ. ಎರಡು ಕಡೆಯರವನ್ನು ರಾಜಿಸಂಧಾನ ಮಾಡಲು ಸಿ.ಕೆ.ಮಂಜುನಾಥ್ ಯಾರು ಎಂದು ಜಿಲ್ಲಾ ಅಂಬೇಡ್ಕರ್ ಸಂಘದ ಅಧ್ಯಕ್ಷ ಪಿ.ಸಂಘಸೇನಾ ಪ್ರಶ್ನಿಸಿದರು.
ಆದಿಕರ್ನಾಟಕ ಅಭಿವೃದ್ಧಿ ಸಂಘದ ಅನ್ಯಾಯ, ಅಕ್ರಮ ಪ್ರಕರಣ ನ್ಯಾಯಾಲಯದಲ್ಲಿ ಇರಬೇಕಾದರೆ ಡಾ.ಜಿಲ್ಲಾ ಬಿ.ಆರ್.ಅಂಬೇಡ್ಕರ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ.ಮಂಜುನಾಥ್, ಇತರರು ಪತ್ರಿಕಾಗೋಷ್ಠಿ ಮಾಡಿ ಎರಡು ಕಡೆಯವರನ್ನು ಸಂಧಾನ ಮಾಡುತ್ತೇವೆ ಎಂದು ಹೇಳಿಕೆ ನೀಡಿರುವುದು ನ್ಯಾಯಾಲಯವನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆಗಳ ಒಕ್ಕೂಟ ಅಸ್ತಿತ್ವದಲ್ಲೇ ಇಲ್ಲ. ಸಮುದಾಯ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರನ್ನು ಆಯ್ಕೆ ಮಾಡಿಲ್ಲ ಎಂದು ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆದಿಕರ್ನಾಟಕ ಅಭಿವೃದ್ಧಿ ಸಂಘ ಸಮುದಾಯದ ಆಸ್ತಿಯಾಗಿದೆ. ಇಲ್ಲಿ ಹತ್ತಾರು ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಾರೆ. ಇಲ್ಲಿ ಕಲಿತವರು ಉನ್ನತ ಅಧಿಕಾರಿಗಳು ಆಗಿದ್ದಾರೆ. ಈ ಸಂಘಕ್ಕೆ ನಗರಸಭಾ ಮಾಜಿ ಅಧ್ಯಕ್ಷ ಎಸ್.ನಂಜುಡಸ್ವಾಮಿ ಸ್ವಯಂಘೋಷಿತ ಅಧ್ಯಕ್ಷರಾಗಿದ್ದಾರೆ. ಸಂಘದ ಆಸ್ತಿ ಪರಭಾರೆ ವಿರುದ್ದ ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿಸಂರಕ್ಷಣಾ ಸಮಿತಿ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ ಮೇರೆಗೆ ಕಂದಾಯ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ನ್ಯಾಯದಲ್ಲಿ ಮೊಕದ್ದಮೆ ಹೂಡಿದ್ದು. ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ನಿರ್ದೇಶಕರು ಇತರರ ಮೇಲೆ ಎಫ್‌ಐಆರ್ ಆಗಿದೆ. ಸಂಘಕ್ಕೆ ಆಡಳಿತಾಧಿಕಾರಿ ನೇಮಕಕ್ಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದರು. ಮಧ್ಯಂತರ ಜಾಮೀನು ರದ್ದು ಆಗಿದೆ. ಮುಖ್ಯವಾದವರನ್ನೇ ಪೋಲಿಸರು ಇನ್ನೂ ಬಂಧಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಆದಿಕರ್ನಾಟಕ ಅಭಿವೃದ್ಧಿ ಸಂಘ, ಅಧ್ಯಕ್ಷರ ಪರ ಸಂಘದ ನಿರ್ದೇಶಕ ಎಸ್.ಮಹದೇವಯ್ಯ, ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ.ಮಂಜುನಾಥ್ ಪತ್ರಿಕಾಗೋಷ್ಟಿ ನಡೆಸಿದ್ದಾರೆ. ಸಂಘದ ಆಸ್ತಿ ಪರಭಾರೆಯಾದ ಮೇಲೆ ಎಸ್.ಮಹದೇವಯ್ಯನವರು ನಿರ್ದೇಶಕರಾಗಿ ಏನು ಮಾಡುತ್ತಿದ್ದರು ?. ಹರಿಜನ ವಿದ್ಯಾರ್ಥಿ ನಿಲಯದ ಹೆಸರಿನಲ್ಲಿ ಆಸ್ತಿ ಇದ್ದ ಮೇಲೆ ಆದಿಕರ್ನಾಟಕ ಅಭಿವೃದ್ದಿ ಸಂಘದಿಂದ 30 ವರ್ಷ ಹೇಗೆ ಭೋಗ್ಯ ಕರಾರು ಮಾಡಿದ್ದರು. ಸಬ್ ಜಿಸ್ಟರ್ ಸಮರ್ಥಿಸಿಕೊಳ್ಳುವುದು ಸರಿಯೇ. ಸಂಘದ ಆಸ್ತಿ ಪರಭಾರೆಯಲ್ಲಿ ಸಂಘದ ನಿರ್ದೇಶಕ ಎಸ್. ಮಹದೇವಯ್ಯ, ಸಬ್ ರಿಜಿಸ್ಟರ್ ಶಾಮೀಲಾಗಿದ್ದಾರೆ ಅವರೆಲ್ಲ ಮೇಲೆ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಚಾಮುಲ್ ನಿರ್ದೇಶಕ ರೇವಣ್ಣ, ಸೋಮಣ್ಣ, ಶಿವಣ್ಣ, ದಡದಹಳ್ಳಿಶಂಕರ್, ಹೆಬ್ಬಸೂರು ಉಮೇಶ್ ಹಾಜರಿದ್ದರು.