ಜಿಲ್ಲೆ

ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ದೀನ್ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ (ಡೇ-ನಲ್ಮ್) ಸ್ವಯಂ ಉದ್ಯೋಗ ಕಾರ್ಯಕ್ರಮದಡಿ ವೈಯಕ್ತಿಕ ಸಾಲ, ಗುಂಪು ಸಾಲ ಮತ್ತು ಸ್ವ-ಸಹಾಯ ಸಂಘಗಳಿಗೆ ಕ್ರೆಡಿಟ್ ಲಿಂಕೇಜ್‌ಗೆ ಸಂಬಂಧಿಸಿದಂತೆ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಚಾಮರಾಜನಗರ ಜಿಲ್ಲೆಯ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸೌಲಭ್ಯ ನೀಡಲಾಗುತ್ತದೆ. ವೈಯಕ್ತಿಕ ಸಾಲದಡಿ 2 ಲಕ್ಷ ರೂ.ವರೆಗೆ, ಸ್ವ-ಸಹಾಯ ಸಂಘದ ಸದಸ್ಯರು ಗುಂಪು ಚಟುವಟಿಕೆ ನಡೆಸಲು ರೂ.10 ಲಕ್ಷದವರೆಗೆ ಮತ್ತು ಕ್ರೆಡಿಟ್ ಲಿಂಕೇಜ್‌ಗೆ ಸಂಬಂಧಿಸಿದಂತೆ ಸ್ವ-ಸಹಾಯ ಸಂಘಗಳ ಉಳಿತಾಯಕ್ಕೆ ಅನುಗುಣವಾಗಿ ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿರುತ್ತದೆ.

ಚಾಮರಾಜನಗರ ನಗರಸಭೆಗೆ ವೈಯಕ್ತಿಕ ಸಾಲದಡಿ 23, ಗುಂಪು ಸಾಲದಡಿ 2 ಗುರಿ ಮತ್ತು ಎಸ್‌ಎಚ್ ಕ್ರೆಡಿಟ್ ಲಿಂಕೇಜ್‌ಗೆ 29 ಗುರಿಯನ್ನು ನಿಗದಿಪಡಿಸಲಾಗಿದೆ. ಕೊಳ್ಳೇಗಾಲ ನಗರಸಭೆಗೆ ವೈಯಕ್ತಿಕ ಸಾಲದಡಿ 17, ಗುಂಪು ಸಾಲದಡಿ 1 ಗುರಿ ಮತ್ತು ಎಸ್.ಎಚ್.ಜಿ ಕ್ರೆಡಿಟ್ ಲಿಂಕೇಜ್‌ಗೆ 21 ಗುರಿಯನ್ನು ನಿಗದಿಪಡಿಸಲಾಗಿರುತ್ತದೆ. ಗುಂಡ್ಲುಪೇಟೆ ಪುರಸಭೆಗೆ ವೈಯಕ್ತಿಕ ಸಾಲದಡಿ 9, ಗುಂಪು ಸಾಲದಡಿ 1 ಮತ್ತು ಎಸ್‌ಎಚ್ ಕ್ರೆಡಿಟ್ ಲಿಂಕೇಜ್‌ಗೆ 11 ಗುರಿ ನಿಗದಿಪಡಿಸಲಾಗಿದೆ. ಯಳಂದೂರು ಪಟ್ಟಣ ಪಂಚಾಯಿತಿಗೆ ವೈಯಕ್ತಿಕ ಸಾಲದಡಿ 3 ಮತ್ತು ಎಸ್‌ಎಚ್‌ಜಿ ಕ್ರೆಡಿಟ್ ಲಿಂಕೇಜ್‌ಗೆ 4 ಗುರಿ ಮತ್ತು ಹನೂರು ಪಟ್ಟಣ ಪಂಚಾಯಿತಿಗೆ ವೈಯಕ್ತಿಕ ಸಾಲದಡಿ 4 ಮತ್ತು ಎಸ್‌ಎಚ್ ಕ್ರೆಡಿಟ್ ಲಿಂಕೇಜ್‌ಗೆ 5 ಗುರಿ ನಿಗಧಿಪಡಿಸಲಾಗಿದೆ.

ಅರ್ಜಿ ಸಲ್ಲಿಸುವವರು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಾಸವಿರಬೇಕು. ತಮ್ಮ ಇತ್ತೀಚಿನ 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿ ಮತ್ತು ಇನ್ನಿತರೆ ಅಗತ್ಯ ದಾಖಲಾತಿಗಳೊಂದಿಗೆ ನಗರ ಸ್ಥಳೀಯ ಸಂಸ್ಥೆಗಳ ಡೇ-ನಲ್ಮ್ ಶಾಖೆಯ ಸಮುದಾಯ ಸಂಘಟನಾಧಿಕಾರಿ ಮತ್ತು ಸಮುದಾಯ ಸಂಘಟಕರನ್ನು ಸಂಪರ್ಕಿಸುವಂತೆ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಎ. ಮಹಮ್ಮದ್ ಅಕ್ಬರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.