ಚಾಮರಾಜನಗರ: ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ-ಸಂಸ್ಥೆಗಳ ಮುಖಂಡರು ಹಾಗೂ ವಿದ್ಯಾರ್ಥಿಗಳು ಯೋಗ ಪ್ರದರ್ಶನ ಮಾಡಿದರು.
ಬೆಳಗ್ಗೆ 6 ಗಂಟೆಗೆ ಮೈದಾನದಲ್ಲಿ ಜಮಾಯಿಸಿದ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಶಿಕ್ಷಕ ನಿಜಗುಣ ಅವರ ಮಾರ್ಗದರ್ಶನದಲ್ಲಿ ಧ್ಯಾನ, ಸೂರ್ಯ ನಮಸ್ಕಾರ ಹಾಗೂ ಇತರ ಆಸನಗಳನ್ನು ಪ್ರದರ್ಶನ ಮಾಡಿದರು.