ಕೊಳ್ಳೇಗಾಲ: ಪಟ್ಟಣದ ನೂರ್ ಮೊಹಲ್ಲಾ ಬಡಾವಣೆ ಯುವಕನೊಬ್ಬ ನಾಪತ್ತೆಯಾಗಿರುವ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ಬಡಾವಣೆಯ ಅಕ್ಬರ್‌ಸಾಬ್ ಅವರ ಮಗ ಮಹಮ್ಮದ್ ಯೂನಿಷ್ (25) ನಾಪತ್ತೆಯಾಗಿರುವ ಯುವಕ. ಈತ ಜೂ.17ರಂದು ಮನೆಯಿಂದ ಹೊರಗೆ ಬರುವುದಾಗಿ ಹೇಳಿ ಹೋದವನ್ನು ಮತ್ತೆ ಮನೆಗೆ ಹಿಂದಿರುಗಿಲ್ಲ. ಪಾಲಕರು ಈತನನ್ನು ಎಲ್ಲ ಕಡೆ ಹುಡುಕಾಡಿದರೂ ಸಿಗದ ಹಿನ್ನೆಲೆ ಜೂ.19ರಂದು ಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.