ಜಿಲ್ಲೆ

ಜೂ. 20ರಂದು ಸಂತೇಮರಹಳ್ಳಿಯಲ್ಲಿ ಸಭೆ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ವಿದ್ಯುತ್ ಸಂಬಂಧಿತ ಸಮಸ್ಯೆಗಳ ಇತ್ಯರ್ಥಕ್ಕಾಗಿ ಸಂತೇಮರಹಳ್ಳಿ ನಿಗಮದ ಉಪವಿಭಾಗ ಕಚೇರಿಯಲ್ಲಿ ಜೂ.20ರಂದು ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ಜನ ಸಂಪರ್ಕ ಸಭೆ ನಡೆಯಲಿದೆ. ಗ್ರಾಹಕರು ವಿದ್ಯುತ್ ಕುರಿತ ಸಮಸ್ಯೆಗಳಿದ್ದಲ್ಲಿ ಸಭೆಗೆ ಹಾಜರಾಗಿ ತಿಳಿಸುವಂತೆ ನಿಗಮದ ಸಂತೇಮರಹಳ್ಳಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.