ಚಾಮರಾಜನಗರ: ಅಂಧತ್ವ ನಿವಾರಣೆಯಲ್ಲಿ ರೋಟರಿ ಸೇವೆ ಅನನ್ಯವಾಗಿದೆ ಎಂದು ಸಂತೇಮರಹಳ್ಳಿ ಸಮುದಾಯದ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ರೇಣುಕಾದೇವಿ ಹೇಳಿದರು.
ನಗರದ ರೋಟರಿ ಭವನದಲ್ಲಿ ರೋಟರಿ ಸಂಸ್ಥೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ರೋಟರಿ ಸಂಸ್ಥೆಯು ಪ್ರತಿ ತಿಂಗಳು ಮೊದಲನೆಯ ಭಾನುವಾರ ನಡೆಸುವ ಉಚಿತ ಕಣ್ಣಿನ ತಪಾಸಣಾ ಶಿಬಿರದಿಂದ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಜನತೆಗೆ ಅನುಕೂಲವಾಗಿದೆ. ಇಂತಹ ಶಿಬಿರವನ್ನು ಸಂತೇಮರಹಳ್ಳಿ ಭಾಗಕ್ಕೂ ವಿಸ್ತರಿಸುವ ಜೊತೆಗೆ ಅ ಭಾಗದ ಗ್ರಾಮಾಂತರ ಪ್ರದೇಶದ ಜನತೆಗೆ ಹೆಚ್ಚು ಅನುಕೂಲ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.
ಸನ್ಮಾನ ಸ್ವೀಕರಿಸಿದ ಡಾ.ಜನಾರ್ಧನ್ ಮಾತನಾಡಿ, ಸೇವೆಯಲ್ಲಿ ತೊಡಗಿರುವ ವ್ಯದ್ಯರನ್ನು ಗುರುತಿಸುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಸೇವೆ ಸಲ್ಲಿಸಲು ಪ್ರೇರಣಿ ನೀಡಿದ್ದೀರಿ. ತಮ್ಮನ್ನು ಸನ್ಮಾನಿಸಿ ಜವಾಬ್ದಾರಿ ಹೆಚ್ಚು ಮಾಡಿದೀರಿ ಇದ್ಕಕಾಗಿ ರೋಟರಿ ಸಂಸ್ಥೆಯ ಪದಾಧಿಕಾರಿಗಳಿಗೆ ಋಣಿಯಾಗಿರುತ್ತೇವೆ ಎಂದರು. ರೋಟರಿ ಅಧ್ಯಕ್ಷ ಸಿ.ಎನ್.ಚಂದ್ರಪ್ರಭಜೈನ್, ಡಾ.ಮಮತಾ, ರೋಟರಿ ಕಾರ್ಯದರ್ಶಿ ಅಬ್ದುಲ್ ಅಜೀಜ್, ಜಿ.ಆರ್.ಅಶ್ವಥ್‌ನಾರಾಯಣ್, ಕೆ.ಎಂ.ಮಹದೇವಸ್ವಾಮಿ, ಪ್ರಕಾಶ್ ,ಕೆಂಪನಪುರ ಸಿದ್ದರಾಜು, ಅಶೋಕ್, ಗುರುಸ್ವಾಮಿ, ರಾಮಸಮುದ್ರ ಎಲ್.ನಾಗರಾಜು ಮತ್ತು ಇತರರು ಇದ್ದರು.