ಜಿಲ್ಲೆ

ದನ, ಕರುಗಳನ್ನು ರಸ್ತೆಗೆ ಬಿಡದಂತೆ ಸೂಚನೆ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯಲ್ಲಿ ದನ, ಕರುಗಳನ್ನು ಸಾಕುವವರು ಜಾನುವಾರುಗಳನ್ನು ರಸ್ತೆಗೆ ಬಿಡದೆ ಮನೆಯಲ್ಲಿಯೇ ಕಟ್ಟಿ ಹಾಕಿಕೊಂಡು ಸಾಕಬೇಕು ಎಂದು ನಗರಸಭೆ ತಿಳಿಸಿದೆ. ದನ, ಕರುಗಳನ್ನು ರಸ್ತೆಗೆ ಬಿಡುವುದರಿಂದ ಸಾರ್ವಜನಿಕರ ಒಡಾಟ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಅಪಘಾತಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ದನ, ಕರುಗಳು ರಸ್ತೆಯಲ್ಲಿ ಕಂಡು ಬಂದರೆ ಬಿಡಾಡಿ ದನಗಳೆಂದು ಪರಿಗಣಿಸಿ ದಂಡ ವಿಧಿಸಿ, ಪಿಂಜರಾಪೋಲ್‌ಗೆ ಕಳುಹಿಸಲು ಕ್ರಮವಹಿಸಲಾಗುವುದು. ಇದರಿಂದ ಆಗುವ ನಷ್ಟಗಳಿಗೆ ದನ, ಕರು ಮಾಲೀಕರೇ ನೇರ ಜವಾಬ್ದಾರರಾಗಿದ್ದು, ನಗರಸಭೆ ಜವಾಬ್ದಾರರಾಗುವುದಿಲ್ಲ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.