Oplus_131072 
ಜಿಲ್ಲೆ

ಗೌಡಹಳ್ಳಿ ಗ್ರಾಮದಲ್ಲಿ ಪಂಪ್‌ಸೆಟ್ ಕಳ್ಳತನ

ಯಳಂದೂರು: ತಾಲೂಕಿನ ಗೌಡಹಳ್ಳಿ ಗ್ರಾಮದ ಜಮೀನಿನಲ್ಲಿ ಮಂಗಳವಾರ ಪಂಪ್‌ಸೆಟ್ ಕಳವಾಗಿದೆ. ಗ್ರಾಮದ ಮಹದೇವಸ್ವಾಮಿ ಅವರ ಜಮೀನಿನಲ್ಲಿ ಪಂಪ್‌ಸೆಟ್ ಅನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಇನ್ನೊಂದು ಓಪನ್‌ವೆಲ್ ಮೋಟಾರ್ ಕೂಡ ಇತ್ತು. ಇದನ್ನೂ ಕಳ್ಳರು ಕದ್ದೊಯ್ಯಲು ಚೀಲಕ್ಕೆ ತುಂಬಿದ್ದು, ಭಾರ ಇದುದ್ದರಿಂದ ಇಲ್ಲೇ ಬಿಟ್ಟಿದ್ದಾರೆ. ಈ ಬಗ್ಗೆ ಯಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.