ಜಿಲ್ಲೆ

ಗುಡಿ ಕೈಗಾರಿಕೆ ಆರಂಭಿಸಿ

ಚಾಮರಾಜನಗರ: ಕಾಡಂಚಿನಿಂದ ಕೂಡಿರುವ ಹನೂರು ಭಾಗದಲ್ಲಿ ಶಾಲೆಗಳು ಇನ್ನಷ್ಟು ಅಭಿವೃದ್ಧಿಯಾಗಬೇಕು. ಮಕ್ಕಳಿಗೆ ಸೌಕರ್ಯ ಒದಗಿಸಬೇಕು ಎಂದು ಹನೂರು ತಾಲೂಕಿನ ಉದ್ದನೂರು ಗ್ರಾಮದ ಮಲ್ಲಣ್ಣ ಹೇಳಿದರು.

ಚಾಮರಾಜನಗರ ಲೋಕಸಭಾ ಕ್ಷೇತ್ರದ ನೂತನ ಸಂಸದ ಸುನೀಲ್‌ಬೋಸ್ ಮೇಲೆ ಜನರು ಇಟ್ಟಿರುವ ನಿರೀಕ್ಷೆಗಳ ಕುರಿತು ಅವರು ವಿಜಯವಾಣಿಯೊಂದಿಗೆ ಮಾತನಾಡಿದರು. ಗ್ರಾಮಗಳಿಗೆ ಸಮರ್ಪಕ ಬಸ್ ಸೌಕರ್ಯ ಒದಗಿಸಬೇಕು. ಹನೂರು ಮ.ಬೆಟ್ಟದ ರಸ್ತೆ ಅಭಿವೃದ್ಧಿಯಾಗಬೇಕು. ಹೆಚ್ಚು ಬಡವರ್ಗದ ಜನರೇ ವಾಸಿಸುವ ತಾಲೂಕಿನಲ್ಲಿ ಗುಡಿ ಕೈಗಾರಿಕೆ ತೆರೆದು ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಬೇಕು. ಈ ಬಗ್ಗೆ ನೂತನ ಸಂಸದರು ಗಮನಹರಿಸಿದರೆ ಕ್ಷೇತ್ರದ ಜನತೆಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.