ಚಾಮರಾಜನಗರ: ನಗರದ ಸೈನಿಕ್ ಸ್ಪೋರ್ಟ್ಸ ಕ್ಲಬ್‌ನ ಕ್ರೀಡಾ ಪಟುಗಳು ಉಡುಪಿಯಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಉಡುಪಿಯ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಷಿಯೇಷನ್ ವತಿಯಿಂದ ನಡೆದ ಯೂಥ್ ಮೀಟ್ 2024ರ ರಾಜ್ಯ ಮಟ್ಟದ 18 ವರ್ಷದೊಳಗಿನವರ ಕ್ರೀಡಾಕೂಟದ ತಟ್ಟೆ ಎಸೆತ ಸ್ಪರ್ದೆಯಲ್ಲಿ ಸೈನಿಕ್ ಸ್ಪೋರ್ಟ್ಸ ಕ್ಲಬ್‌ನ ಅವಿನಾಶ್ ಚಿನ್ನದ ಪದಕ, ಗುಂಡು ಎಸೆತ ವಿಭಾಗದಲ್ಲಿ ಸುಹಾಶ್ ಬೆಳ್ಳಿ ಪದಕ, ಹೆಪಾಥ್ಲಾನ್ ವಿಭಾಗದಲ್ಲಿ ಚಿನ್ಮಯ್, ಚಿನ್ನದ ಪದಕವನ್ನು ಪಡೆದಿದ್ದಾರೆ.
ಇದಲ್ಲದೇ ಭೂಮಿಕಾ ತಟ್ಟೆ ಎಸೆತದಲ್ಲಿ ಬೆಳ್ಳಿ ಪದಕ ಹಾಗೂ ಎತ್ತರ ಜಿಗಿತ ಸ್ಪರ್ದೆಯಲ್ಲಿ ಹಿಮಾನಿ ಕಂಚಿನ ಪದಕವನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕ್ರೀಡಾ ಪಟುಗಳ ಸಾಧನೆಗೆ ಸೈನಿಕ್ ಸ್ಪೋರ್ಟ್ಸ ಕ್ಲಬ್‌ನ ಮುಖ್ಯ ತರಬೇತುದಾರ ಶಿವು ಅಭಿನಂದಿಸಿದ್ದಾರೆ.