ಜಿಲ್ಲೆ

ಜನನ ಮಂಟಪದ ನೂತನ ನಾಮಲಕ ಅನಾವರಣ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಶ್ರೀಚಾಮರಾಜೇಶ್ವರ ಒಡೆಯರ್ ಜನಿಸಿದ ಐತಿಹಾಸಿಕ ಜನನ ಮಂಟಪದಲ್ಲಿ ಯುವಬ್ರಿಗೇಡ್ ವತಿಯಿಂದ ನೂತನ ನಾಮಲಕ ಅನಾವರಣಗೊಳಿಸಲಾಯಿತು.

ನಗರದ ರಥದ ಬೀದಿಯಲ್ಲಿರುವ ಜನನ ಮಂಟಪವನ್ನು ಇತ್ತೀಚೆಗೆ ಸ್ವಚ್ಛಗೊಳಿಸಿ, ಹೂವಿನಿಂದ ಅಲಂಕಾರ ಮಾಡಿ, ಭಾರತದ ಆಧುನಿಕ ಪ್ರಜಾಪ್ರಭುತ್ವದ ಆಡಳಿತದ ಹರಿಕಾರ ಮಹಾರಾಜ ಶ್ರೀ ಚಾಮರಾಜ ಒಡೆಯರ್ ಜನನ ಮಂಟಪ ಎಂಬ ನೂತನ ನಾಮಲಕವನ್ನು ಎಂ.ಜಿ.ಗ್ರೂಪ್ ಮಾಲೀಕ ಜಿ.ಮಂಜು ಅನಾವರಣಗೊಳಿಸಿದರು.

ಶ್ರೀಚಾಮರಾಜ ಒಡೆಯರ್ ಜನಿಸಿದ ಜನನ ಮಂಟಪ ಸಾಕಷ್ಟು ವರ್ಷಗಳಿಂದ ಸ್ವಚ್ಛತೆ ಕಾಣದೆ, ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಇದನ್ನು ಯುವ ಬ್ರಿಗೇಡ್ ವತಿಯಿಂದ ಸ್ವಚ್ಛಗೊಳಿಸಿ ನಾಮಲಕ ಅಳವಡಿಸಿರುವುದು ಉತ್ತಮ ಕಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಜನನ ಮಂಟಪವನ್ನು ವಸ್ತು ಸಂಗ್ರಹಾಲಯ ಮಾಡಬೇಕು ಎಂದು ಒತ್ತಾಯಿಸಿದರು. ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ಪ್ರವೀಣ್, ಸಹ ಸಂಚಾಲಕ ರಾಜೇಂದ್ರ, ರಘು, ಯಶ್ವಂತ್, ಪ್ರಮೋದ್, ಅಭಿಷೇಕ್, ಹೇಮಂತ್, ಪೃಥ್ವಿರಾಜ್, ರಾಜು, ಮಹೇಂದ್ರ, ಹರ್ಷತ್ ಗೌಡ, ಚಂದ್ರು, ಸತೀಶ್, ಮಧು, ಸುನೀಲ್ ಭಾಗವಹಿಸಿದ್ದರು.