ಜಿಲ್ಲೆ

ಭಕ್ತಾದಿಗಳಿಗೆ ಮಜ್ಜಿಗೆ ವಿತರಣೆ

ಎ.ಎಸ್.ಮಣಿಕಂಠ

ಚಾಮರಾಜನಗರ: ಗ್ರಾಮಾಂತರ ಬಸವ ಜಯಂತೋತ್ಸವ ಹಾಗೂ ಪೂಜ್ಯದ್ವಯರ ಸಂಸ್ಮರಣೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ಇಂಚರ ಗ್ರೂಪ್ಸ್ ಹಾಗೂ ವಿ.ಸೋಮಣ್ಣ ಅಭಿಮಾನಿ ಬಳಗದ ವತಿಯಿಂದ ಮಜ್ಜಿಗೆ ವಿತರಿಸಲಾಯಿತು.

ನಗರದ ಜೋಡಿರಸ್ತೆಯಲ್ಲಿರುವ ಇಂಚರ ಗ್ರೂಪ್ಸ್ ಶ್ರೀಸಾಯಿ ಹೋಟಲ್ ಮುಂಭಾಗದಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದವರಿಗೆ ಸ್ಟೈಲ್ ಮಂಜುನಾಥ್ ಅವರ ನೇತೃತ್ವದಲಿ ್ಲಮಜ್ಜಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಆರ್.ಎನ್.ಸ್ವಾಮಿ, ಈಶ್ವರ್ ರಕ್ಷಿತ್, ಕೊತ್ತಲವಾಡಿ ಕುಮಾರ್, ರಾಧಾಕೃಷ್ಣ, ವಿಶ್ವ, ರವಿ, ಬಸಪ್ಪ, ನಾಗೇಂದ್ರ, ಬಸವರಾಜು ಪಾಪು, ಗುರುಸ್ವಾಮಿ, ಕಾವುದವಾಡಿ ಗುರು ಹಾಗೂ ಇಂಚರ ಗ್ರೂಪ್ ಸಿಬ್ಬಂದಿವರ್ಗ ಹಾಗೂ ಇತರರು ಹಾಜರಿದ್ದರು.